Friday, November 21, 2025

BREAKING NEWS | ದುಬೈ ಏರ್‌ಶೋನಲ್ಲಿ ತೇಜಸ್‌ ಯುದ್ಧವಿಮಾನ ಪತನ

ಹೊಸದಿಗಂತ ಡಿಜಿಟಲ್ ಡೆಸ್ಕ್;

ದುಬೈ ವಾಯು ಪ್ರದರ್ಶನ ಸಂದರ್ಭದಲ್ಲಿ ತೇಜಸ್ ಯುದ್ಧ ವಿಮಾನ ದುರಂತ ರೀತಿಯಲ್ಲಿ ಪತನವಾಗಿದೆ.

ದುಬೈನಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನದ ವೇಳೆ ಆಗಸದಲ್ಲಿ ಹಾರುತ್ತಿದ್ದಾಗಲೇ ತೇಜಸ್‌ ಯುದ್ಧ ವಿಮಾನ ಪತನಗೊಂಡಿರುವ ಘಟನೆ ನಡೆದಿದೆ.

ಬೆಂಗಳೂರಿನ ಹೆಚ್‌ಎಎಲ್‌ ನಿರ್ಮಿತ ಲಘು ಯುದ್ಧ ವಿಮಾನವು ಸ್ಥಳೀಯ ಕಾಲಮಾನ ಇಂದು ಮಧ್ಯಾಹ್ನ 2:10ರ ಸುಮಾರಿಗೆ ವೈಮಾನಿಕ ಪ್ರದರ್ಶನ ನೀಡುವಾಗ ಪತನಗೊಂಡಿದೆ. ಸದ್ಯ ತೇಜಸ್‌ ಯುದ್ಧವಿಮಾನ ಪತನಗೊಂಡಿರುವ ವಿಡಿಯೋ ತುಣುಕುಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.

ವಿಮಾನ ಪತನಗೊಂಡ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದ್ದು, ವೈಮಾನಿಕ ಪ್ರದರ್ಶನ ವೀಕ್ಷಿಸಲು ಆಗಮಿಸಿದ್ದ ಸಾವಿರಾರು ಸಂಖ್ಯೆಯ ಪ್ರೇಕ್ಷಕರಲ್ಲಿ ಆತಂಕ ಮೂಡಿಸಿದೆ.

ಸದ್ಯ ಘಟನೆಯಲ್ಲಿ ಪೈಲಟ್‌ ಕೂಡ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಆದ್ರೆ ಇದು ತಾಂತ್ರಿಕ ದೋಷದಿಂದ ಆಗಿದೆಯೇ? ಅಥವಾ ಪೈಲಟ್‌ನ ದೋಷದಿಂದ ಆಗಿದೆಯೇ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

error: Content is protected !!