Tuesday, September 30, 2025

ಯುದ್ಧವನ್ನು ಕ್ರೀಡೆಗೆ ಎಳೆದು ತರುವುದು ಹತಾಶೆಯ ಸಂಕೇತ: ಭೂತದ ಬಾಯಲ್ಲಿ ಭಗವದ್ಗೀತೆ!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರಿಕೆಟ್‌ ಮತ್ತು ಕ್ರೀಡೆಗೆ ರಾಜಕೀಯ ಅಥವಾ ಯುದ್ಧ ವನ್ನು ಎಳೆದು ತರುವುದು ಸರಿಯಲ್ಲ ಎಂದು ಪಾಕಿಸ್ತಾನದ ಸಚಿವ ಹಾಗೂ ಏಷ್ಯನ್‌ ಕ್ರಿಕೆಟ್‌ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಹೇಳಿದ್ದಾರೆ.

ಭಾನುವಾರ ನಡೆದ ಏಷ್ಯಾಕಪ್‌ ಫೈನಲ್‌ನಲ್ಲಿ ಭಾರತ ಜಯಗಳಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ “ಆಪರೇಷನ್ ಸಿಂಧೂರಿನಂತೆ ಕ್ರೀಡಾಂಗಣದಲ್ಲೂ ಫಲಿತಾಂಶ ಒಂದೇ – ಭಾರತ ಗೆಲ್ಲುತ್ತದೆ” ಎಂದು ಬರೆಯಿದ್ದರು.

ಈ ಹೇಳಿಕೆಗೆ ಪ್ರತಿಕ್ರಿಯಿಸಿದ ನಖ್ವಿ, “ಯುದ್ಧವನ್ನು ಕ್ರೀಡೆಗೆ ಎಳೆದು ತರುವುದು ಹತಾಶೆಯ ಸಂಕೇತ. ಕ್ರೀಡೆಗೆ ಯುದ್ಧದ ತಾತ್ಪರ್ಯ ನೀಡುವುದು ಆಟದ ಆತ್ಮವನ್ನು ಅವಮಾನಿಸುವಂತದ್ದು” ಎಂದು ಟೀಕಿಸಿದರು. ಅವರು, “ಯುದ್ಧವೇ ಮಾನದಂಡವಾಗಿದ್ದರೆ, ಪಾಕಿಸ್ತಾನದ ಕೈಯಲ್ಲಿ ಭಾರತ ಅನುಭವಿಸಿದ ಸೋಲುಗಳನ್ನೂ ಇತಿಹಾಸ ಮರೆತಿಲ್ಲ. ಕ್ರಿಕೆಟ್‌ ಪಂದ್ಯದಿಂದ ಅದನ್ನು ಬದಲಿಸಲು ಸಾಧ್ಯವಿಲ್ಲ” ಎಂದು ಪ್ರತಿಕ್ರಿಯೆ ನೀಡಿದರು.