April 12, 2026
Sunday, April 12, 2026
spot_img

ಅಮೆರಿಕದ ಸಿಯಾಟಲ್‌ನಲ್ಲಿ ಸ್ವಾಮಿ ವಿವೇಕಾನಂದರ ಕಂಚಿನ ಪ್ರತಿಮೆ ಅನಾವರಣ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಸಿಯಾಟಲ್ ನಗರದಲ್ಲಿ ಸ್ವಾಮಿ ವಿವೇಕಾನಂದರ ಪೂರ್ಣಪ್ರಮಾಣದ ಕಂಚಿನ ಪ್ರತಿಮೆಯನ್ನು ಸ್ಥಾಪಿಸುವ ಮೂಲಕ ಭಾರತೀಯ ಸಂಸ್ಕೃತಿಯ ಹೆಮ್ಮೆಯನ್ನು ಮೆರೆಯಲಾಗಿದೆ.

ಸಿಯಾಟಲ್‌ನ ಹೃದಯಭಾಗವಾದ ವೆಸ್ಟ್‌ಲೇಕ್ ಚೌಕದಲ್ಲಿ ನೆಲೆ ನಿಂತಿರುವ ಈ ಪ್ರತಿಮೆಯನ್ನು ಭಾರತೀಯ ಶಿಲ್ಪಿ ನರೇಶ್ ಕುಮಾರ್ ಕುಮಾವತ್ ಕೆತ್ತಿದ್ದಾರೆ.

ಶನಿವಾರ ನಡೆದ ವಿಶೇಷ ಸಮಾರಂಭದಲ್ಲಿ ಸಿಯಾಟಲ್ ಮೇಯರ್ ಕೇಟೀ ವಿಲ್ಸನ್ ಹಾಗೂ ಭಾರತದ ಕಾನ್ಸುಲ್ ಜನರಲ್ ಪ್ರಕಾಶ್ ಗುಪ್ತಾ ಅವರು ಈ ಪ್ರತಿಮೆಯನ್ನು ಜಂಟಿಯಾಗಿ ಲೋಕಾರ್ಪಣೆ ಮಾಡಿದರು. 1893ರ ಚಿಕಾಗೋ ವಿಶ್ವ ಧರ್ಮ ಸಂಸತ್ತಿನಲ್ಲಿ ಭಾರತದ ಅಧ್ಯಾತ್ಮ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿದ್ದ ವಿವೇಕಾನಂದರ ನೆನಪು, ಈಗ ಸಿಯಾಟಲ್ ನಗರದ ಮೂಲಕ ಅಮೆರಿಕದಲ್ಲಿ ಮತ್ತೊಮ್ಮೆ ಅಚ್ಚಳಿಯದಂತೆ ಉಳಿಯಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !