Wednesday, January 28, 2026
Wednesday, January 28, 2026
spot_img

ಬ್ರೂಕ್ ‘ಸಿಕ್ಸರ್’ ಚಂಡಮಾರುತ: ಲಂಕಾ ನೆಲದಲ್ಲಿ ಇಂಗ್ಲೆಂಡ್ ನಾಯಕನ ಐತಿಹಾಸಿಕ ಅಬ್ಬರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ್ದಾರೆ. ಕೇವಲ 57 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಬ್ರೂಕ್ ಲಂಕಾ ಬೌಲರ್‌ಗಳನ್ನು ಕಂಗೆಡಿಸಿದರು.

ಈ ಪಂದ್ಯದಲ್ಲಿ ಬ್ರೂಕ್ ಅಕ್ಷರಶಃ ಸಿಕ್ಸರ್ ಮತ್ತು ಬೌಂಡರಿಗಳ ಮಳೆ ಸುರಿಸಿದರು. 57 ಎಸೆತಗಳಲ್ಲಿ ಶತಕ ಪೂರೈಸಿದ ಬ್ರೂಕ್, ಶ್ರೀಲಂಕಾ ನೆಲದಲ್ಲಿ ಅತಿ ವೇಗವಾಗಿ ಈ ಸಾಧನೆ ಮಾಡಿದ ವಿಶ್ವದ 2ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ತಮ್ಮ ಇನಿಂಗ್ಸ್‌ನಲ್ಲಿ ಒಟ್ಟು 9 ಭರ್ಜರಿ ಸಿಕ್ಸರ್ ಸಿಡಿಸಿದ ಬ್ರೂಕ್, ಶ್ರೀಲಂಕಾದಲ್ಲಿ ಏಕದಿನ ಇನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚು ಸಿಕ್ಸ್ ಬಾರಿಸಿದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು.

ಈ ಹಿಂದೆ 2024ರಲ್ಲಿ ಅಫ್ಘಾನಿಸ್ತಾನ ವಿರುದ್ಧ 8 ಸಿಕ್ಸರ್ ಸಿಡಿಸಿದ್ದ ಪಾತುಮ್ ನಿಸ್ಸಂಕಾ ಅವರ ದಾಖಲೆಯನ್ನು ಬ್ರೂಕ್ ಅಳಿಸಿಹಾಕಿದರು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್‌ಗೆ ಆರಂಭದಲ್ಲಿ ಆಘಾತ ಎದುರಾಗಿತ್ತು. ಆದರೆ, ಅನುಭವಿ ಬ್ಯಾಟರ್ ಜೋ ರೂಟ್ (111 ರನ್) ತಂಡಕ್ಕೆ ಆಸರೆಯಾದರು. ಇವರಿಗೆ ಸಾಥ್ ನೀಡಿದ ಹ್ಯಾರಿ ಬ್ರೂಕ್, ಕೇವಲ 66 ಎಸೆತಗಳಲ್ಲಿ ಅಜೇಯ 136 ರನ್ (11 ಫೋರ್, 9 ಸಿಕ್ಸ್) ಗಳಿಸಿ ತಂಡದ ಮೊತ್ತವನ್ನು ಹಿಮಾಲಯದ ಎತ್ತರಕ್ಕೆ ಕೊಂಡೊಯ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !