March 14, 2026
Saturday, March 14, 2026
spot_img

ಬಜೆಟ್ 2026: ಶುದ್ಧ ಇಂಧನ ಕ್ರಾಂತಿಗೆ ಮತ್ತೊಂದು ಹೆಜ್ಜೆ: CNGಯಲ್ಲಿ ಬಯೋ ಗ್ಯಾಸ್ ಬ್ಲೆಂಡಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪರಿಸರ ಸ್ನೇಹಿ ಇಂಧನ ಮತ್ತು ದೀರ್ಘಕಾಲೀನ ಸಾರಿಗೆ ವ್ಯವಸ್ಥೆ ಗುರಿಯಾಗಿಸಿಕೊಂಡು ಕೇಂದ್ರ ಸರ್ಕಾರ 2026ರ ಬಜೆಟ್‌ನಲ್ಲಿ ಮಹತ್ವದ ನೀತಿ ನಿರ್ಧಾರಗಳನ್ನು ಪ್ರಕಟಿಸಿದೆ. ಈಗಾಗಲೇ E20 ಎಥೆನಾಲ್ ಮಿಶ್ರಿತ ಪೆಟ್ರೋಲ್ ಜಾರಿಗೆ ತಂದಿರುವ ಸರ್ಕಾರ, ಮುಂದಿನ ಹಂತವಾಗಿ CNGಗೆ ಕಂಪ್ರೆಸ್ಡ್ ಬಯೋ ಗ್ಯಾಸ್‌ (CBG) ಮಿಶ್ರಣ ಮಾಡುವ ಘೋಷಣೆಯೊಂದಿಗೆ ಶುದ್ಧ ಇಂಧನ ಪರಿವರ್ತನೆಗೆ ಹೊಸ ದಿಕ್ಕು ನೀಡಿದೆ.

ಬಜೆಟ್ ಪ್ರಸ್ತಾಪದಂತೆ, CNG ಹಾಗೂ ಪೈಪ್ಡ್ ನೈಸರ್ಗಿಕ ಅನಿಲ (PNG) ವ್ಯವಸ್ಥೆಗಳಲ್ಲಿ ಹಂತಹಂತವಾಗಿ CBG ಮಿಶ್ರಣ ಕಡ್ಡಾಯವಾಗಲಿದೆ. ಇದರಿಂದ ಕಾರ್ಬನ್ ಉತ್ಸರ್ಜನೆ ಕಡಿಮೆಯಾಗುವ ಜೊತೆಗೆ ಕೃಷಿ ತ್ಯಾಜ್ಯ ಬಳಕೆಯಿಂದ ರೈತರ ಆದಾಯ ಹೆಚ್ಚುವ ನಿರೀಕ್ಷೆ ಇದೆ. ಇಂಧನ ಆಮದು ಮೇಲಿನ ಅವಲಂಬನೆ ತಗ್ಗಿಸುವ ಉದ್ದೇಶವೂ ಈ ನಿರ್ಧಾರದಲ್ಲಿದೆ.

ಇದಕ್ಕೆ ಜೊತೆಗೆ ವಿದ್ಯುತ್ ವಾಹನಗಳ (EV) ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದಾಗಿ ಹಣಕಾಸು ಸಚಿವೆ ಘೋಷಿಸಿದ್ದಾರೆ. EV ಉತ್ಪಾದನೆ, ಚಾರ್ಜಿಂಗ್ ಮೂಲಸೌಕರ್ಯ ವಿಸ್ತರಣೆ ಹಾಗೂ ಸಾರ್ವಜನಿಕ ಸಾರಿಗೆಯಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಬಳಕೆಗೆ ವಿಶೇಷ ಒತ್ತು ನೀಡಲಾಗಿದೆ. ಬ್ಯಾಟರಿ ತಯಾರಿಕೆಗೆ ಅಗತ್ಯವಾದ ಹಲವು ಕಚ್ಚಾ ವಸ್ತುಗಳ ಮೇಲೆ ಕಸ್ಟಮ್ಸ್ ಸುಂಕ ವಿನಾಯಿತಿ ನೀಡುವ ಮೂಲಕ ದೇಶೀಯ ಉತ್ಪಾದನೆಗೆ ಉತ್ತೇಜನ ನೀಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !