March 14, 2026
Saturday, March 14, 2026
spot_img

📊 | ಕಾಮನ್‌ ಜನರ ಮೇಲೆ ಬಜೆಟ್‌ ಎಫೆಕ್ಟ್‌! ಯಾವ ವಸ್ತು ದುಬಾರಿ? ಯಾವುದು ಅಗ್ಗ? ಇಲ್ಲಿದೆ ಲಿಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು 2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿ, ಆತ್ಮ ನಿರ್ಭರ ಭಾರತಕ್ಕೆ ಆದ್ಯತೆ ನೀಡಿದ್ದಾರೆ.

ಬಜೆಟ್​​ನ ಪ್ರಮುಖ ಅಂಶಗಳಲ್ಲಿ​ ಆರ್ಥಿಕತೆಗೆ ಉತ್ತೇಜನ ನೀಡಲು ಕೆಲ ವಸ್ತುಗಳು ಅಗ್ಗವಾದರೆ, ಇನ್ನೂ ಕೆಲವು ದುಬಾರಿಯಾಗಲಿವೆ. ಯಾವ ವಸ್ತು ಅಗ್ಗ? ಯಾವುದು ದುಬಾರಿ? ಇಲ್ಲಿದೆ ಲಿಸ್ಟ್‌

ಯಾವುದು ದುಬಾರಿ?

ಸಿಗರೇಟ್‌ ಮತ್ತು ಬೀಡಿ
ಪಾನ್‌ ಮಸಾಲಾ ರೀತಿಯ ತಂಬಾಕು ಉತ್ಪನ್ನ
ಮದ್ಯ
ಆಮದು ಮಾಡಿಕೊಳ್ಳುವ ಯಂತ್ರೋಪಕರಣಗಳು
ಹೊರದೇಶಗಳಿಂದ ಆಮದು ಮಾಡಿಕೊಳ್ಳುವ ವಸ್ತುಗಳು
ಅನಗತ್ಯ ಆಮದು ವಸ್ತುಗಳು
ವಿದೇಶದಿಂದ ಆಮದಾಗುವ ಪ್ಲಾಸ್ಟಿಕ್ ವಸ್ತುಗಳು
ನಿರ್ದಿಷ್ಟ ಟೆಲಿಕಾಂ ಉಪಕರಣಗಳು
ಐಷಾರಾಮಿ ಕೈಗಡಿಯಾರಗಳು
ರಸಗೊಬ್ಬರ
ಕಾಫಿ ಹುರಿಯುವುದು, ಬ್ರೂಯಿಂಗ್ ಮತ್ತು ವೆಂಡಿಂಗ್ ಮೆಷಿನ್‌
ಆಮದಾಗುವ ಟಿವಿ ಪರಿಕರಗಳು, ಕ್ಯಾಮೆರಾಗಳು ಮತ್ತು ಚಲನಚಿತ್ರ ಚಿತ್ರೀಕರಣಕ್ಕಾಗಿ ಬಳಸುವ ಉಪಕರಣಗಳು

ಯಾವುದು ಅಗ್ಗ?
ಸೌರ ಉಪಕರಣಗಳು
ಸೆಣಬು
ಕ್ರೀಡಾ ಉಪಕರಣಗಳು
ಇವಿ ಬ್ಯಾಟರಿ
ಸ್ಮಾರ್ಟ್‌ ಫೋನ್ಸ್‌
ಚರ್ಮದ ಉತ್ಪನ್ನಗಳು
ಮೈಕ್ರೋವೇವ್
ವಿಮಾನ ಬಿಡಿಭಾಗಗಳು
ಬಯೋ ಗ್ಯಾಸ್‌
ಸಿಎನ್‌ಜಿ
ಸೋಲಾರ್‌ ಬಿಡಿಭಾಗ
ಪಾದರಕ್ಷೆ
ವಿದೇಶಿ ಯಾತ್ರೆ
ಕ್ಯಾನ್ಸರ್ ಮತ್ತು ಮಧುಮೇಹ ಔಷಧಿಗಳು
ಜವಳಿ

    Must Read

    error: Copy ಬೇಡ, Coffee ಜೊತೆ ಹಂಚಿಕೊಳ್ಳಿ !