ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಗಿಲು ಲೇಔಟ್ ಕಾರ್ಯಾಚರಣೆಯ ಬೆನ್ನಲ್ಲೇ, ಬೆಂಗಳೂರಿನ ಥಣಿಸಂದ್ರದ ಎಸ್‌ಆರ್‌ಕೆ ಲೇಔಟ್‌ನಲ್ಲಿ ಬಿಡಿಎ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಇಂದು ಬೆಳ್ಳಂಬೆಳಿಗ್ಗೆ ಅಖಾಡಕ್ಕಿಳಿದ ಅಧಿಕಾರಿಗಳು ಸುಮಾರು 100 ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಜಾಗವನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.
ಹೈಕೋರ್ಟ್ ಆದೇಶದ ಅನ್ವಯ ನಡೆದ ಈ ಕಾರ್ಯಾಚರಣೆಯಲ್ಲಿ ಒಟ್ಟು 22 ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ. ಇದರಲ್ಲಿ ಕಾರ್ ಗ್ಯಾರೇಜ್‌ಗಳು, ಗೋಡೌನ್‌ಗಳು ಮತ್ತು ಶೀಟ್ ಮನೆಗಳು ಸೇರಿವೆ. ಆದರೆ, ಈ ಮನೆಗಳಲ್ಲಿ ವಾಸವಿದ್ದವರೆಲ್ಲರೂ ಬಾಡಿಗೆದಾರರಾಗಿದ್ದು, ಮನೆ ಮಾಲೀಕರ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. “ಯಾವುದೇ ಮುನ್ಸೂಚನೆ ಅಥವಾ ನೋಟಿಸ್ ನೀಡದೆ ಏಕಾಏಕಿ ಮನೆಗಳನ್ನು ಕೆಡವಲಾಗಿದೆ” ಎಂದು ಸಂತ್ರಸ್ತರು ಕಣ್ಣೀರಿಟ್ಟಿದ್ದಾರೆ.

