Friday, November 14, 2025

ಸಿದ್ದರಾಮಯ್ಯ ಸಂಪುಟದಿಂದ 2026ರ ಸರ್ಕಾರಿ ರಜೆಗಳ ಬಂಪರ್ ಕೊಡುಗೆ: ಶಾಲೆ, ಕಚೇರಿಗಳಿಗೆ ಭರ್ಜರಿ ಹಾಲಿಡೇ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ಸರ್ಕಾರವು 2026ನೇ ಸಾಲಿಗೆ ಸಂಬಂಧಿಸಿದಂತೆ ಸರ್ಕಾರಿ ರಜಾ ದಿನಗಳ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಸಾರ್ವತ್ರಿಕ ರಜಾ ಪಟ್ಟಿಗೆ ಅನುಮೋದನೆ ನೀಡಲಾಗಿದ್ದು, ರಾಷ್ಟ್ರೀಯ ಹಬ್ಬಗಳು ಮತ್ತು ನಾಡಿನ ಪ್ರಮುಖ ಹಬ್ಬಗಳು ಸೇರಿದಂತೆ ಒಟ್ಟು 20 ದಿನಗಳ ಸರ್ಕಾರಿ ರಜೆಯನ್ನು ಘೋಷಿಸಲಾಗಿದೆ.

ಈ ರಜಾ ದಿನಗಳು ಮುಂದಿನ ವರ್ಷ ರಾಜ್ಯದ ಎಲ್ಲಾ ಶಾಲೆಗಳು, ಸರ್ಕಾರಿ ಕಚೇರಿಗಳು ಮತ್ತು ಸಂಸ್ಥೆಗಳಿಗೆ ಅನ್ವಯವಾಗಲಿವೆ.

📅 2026ರ ಸಾರ್ವತ್ರಿಕ ರಜಾ ದಿನಗಳ ಪಟ್ಟಿ:

ದಿನಾಂಕವಾರಹಬ್ಬ/ದಿನಾಚರಣೆ
15.01.2026ಗುರುವಾರಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
26.01.2026ಸೋಮವಾರಗಣರಾಜ್ಯೋತ್ಸವ
19.03.2026ಗುರುವಾರಯುಗಾದಿ ಹಬ್ಬ
21.03.2026ಶನಿವಾರಖುತುಬ್-ಎ-ರಂಜಾನ್
31.03.2026ಮಂಗಳವಾರಮಹಾವೀರ ಜಯಂತಿ
03.04.2026ಶುಕ್ರವಾರಗುಡ್ ಫ್ರೈಡೇ
14.04.2026ಮಂಗಳವಾರಡಾ. ಬಿ. ಆರ್. ಅಂಬೇಡ್ಕ‌ರ್ ಜಯಂತಿ
20.04.2026ಸೋಮವಾರಬಸವ ಜಯಂತಿ, ಅಕ್ಷಯ ತೃತೀಯ
01.05.2026ಶುಕ್ರವಾರಕಾರ್ಮಿಕ ದಿನಾಚರಣೆ
28.05.2026ಗುರುವಾರಬಕ್ರೀದ್
26.06.2026ಶುಕ್ರವಾರಮೊಹರಂ ಕಡೆ ದಿನ
15.08.2026ಶನಿವಾರಸ್ವಾತಂತ್ರ್ಯ ದಿನಾಚರಣೆ
26.08.2026ಬುಧವಾರಈದ್-ಮಿಲಾದ್
14.09.2026ಸೋಮವಾರವರಸಿದ್ಧಿ ವಿನಾಯಕ ವ್ರತ
02.10.2026ಶುಕ್ರವಾರಗಾಂಧಿ ಜಯಂತಿ
20.10.2026ಮಂಗಳವಾರಮಹಾನವಮಿ, ಆಯುಧಪೂಜೆ
21.10.2026ಬುಧವಾರವಿಜಯದಶಮಿ
10.11.2026ಮಂಗಳವಾರಬಲಿಪಾಡ್ಯಮಿ, ದೀಪಾವಳಿ
27.11.2026ಶುಕ್ರವಾರಕನಕದಾಸ ಜಯಂತಿ
25.12.2026ಶುಕ್ರವಾರಕ್ರಿಸ್​ ಮಸ್​

ಕೆಲವು ಹಬ್ಬಗಳಿಗೆ ರಜೆ ಮಿಸ್: ಕೊಡಗಿಗೆ ವಿಶೇಷ ರಜೆ
ಈ 20 ದಿನಗಳ ಪಟ್ಟಿಯಲ್ಲಿ ಮಹಾ ಶಿವರಾತ್ರಿ (ಫೆಬ್ರವರಿ 15), ಮಹರ್ಷಿ ವಾಲ್ಮೀಕಿ ಜಯಂತಿ (ಅಕ್ಟೋಬರ್ 25), ಕನ್ನಡ ರಾಜ್ಯೋತ್ಸವ (ನವೆಂಬರ್ 01) ಹಾಗೂ ನರಕ ಚತುರ್ದಶಿ (ನವೆಂಬರ್ 08) ಹಬ್ಬಗಳು ಭಾನುವಾರದಂದು ಬಂದ ಕಾರಣ ಅವುಗಳನ್ನು ರಜಾ ಪಟ್ಟಿಯಲ್ಲಿ ನಮೂದಿಸಲಾಗಿಲ್ಲ. ಅದೇ ರೀತಿ, ಎರಡನೇ ಶನಿವಾರದಂದು ಬಂದ ಮಹಾಲಯ ಅಮವಾಸ್ಯೆ (ಅಕ್ಟೋಬರ್ 10) ಸಹ ಪಟ್ಟಿಯಿಂದ ಹೊರಗುಳಿದಿದೆ.

ಇನ್ನು, ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಮೂರು ದಿನಗಳ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ. ಆ ದಿನಗಳು:

ಕ್ರೈಲ್ ಮೂಹೂರ್ತ: 03.09.2026 (ಗುರುವಾರ)

ತುಲಾ ಸಂಕ್ರಮಣ: 18.10.2026 (ಭಾನುವಾರ)

ಹುತ್ತರಿ ಹಬ್ಬ: 26.11.2026 (ಗುರುವಾರ)

ಮುಸ್ಲಿಂ ಹಬ್ಬಗಳಿಗೆ ಹೊಂದಾಣಿಕೆ ರಜೆ
ಮುಸಲ್ಮಾನರ ಹಬ್ಬಗಳಿಗೆ ಘೋಷಿಸಲಾದ ರಜಾದಿನಗಳು ನಿಗದಿತ ದಿನಾಂಕದಂದು ಬರದಿದ್ದರೆ, ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನ ಬಾಂಧವರಿಗೆ ನಿಗದಿತ ರಜೆಗೆ ಬದಲಾಗಿ ಹಬ್ಬದ ದಿವಸವೇ ರಜಾ ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗಿದೆ.

ಸಾರ್ವತ್ರಿಕ ರಜಾ ದಿನಗಳಂದು ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳು ಮುಚ್ಚಲ್ಪಡಲಿದ್ದು, ತುರ್ತು ಕೆಲಸಗಳನ್ನು ವಿಲೇವಾರಿ ಮಾಡಲು ಇಲಾಖಾ ಮುಖ್ಯಸ್ಥರು ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

error: Content is protected !!