Monday, October 20, 2025

ಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಗೆ ಟಿಕೆಟ್ ದರದಲ್ಲಿ ಬಂಪರ್ ಆಫರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸರಣಿ ಮುಕ್ತಾಯವಾದ ಬೆನ್ನಲ್ಲೇ, ಟೀಮ್ ಇಂಡಿಯಾ ಇದೀಗ ರೆಡ್ ಬಾಲ್ ಕ್ರಿಕೆಟ್‌ಗೆ ಮರಳಲು ಸಜ್ಜಾಗಿದೆ. ಈ ಬಾರಿ ಭಾರತ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಹಾಲಿ ಚಾಂಪಿಯನ್ ದಕ್ಷಿಣ ಆಫ್ರಿಕಾ ವಿರುದ್ಧ ಪ್ರತಿಷ್ಠಿತ ಸರಣಿಯನ್ನು ಆಡಲಿದೆ. ಈ ಸರಣಿಯ ಮೊದಲ ಟೆಸ್ಟ್ ಪಂದ್ಯಕ್ಕೆ ಕೊಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಟಿಕೆಟ್ ದರ ಕೇವಲ ₹60 ರಿಂದ ಪ್ರಾರಂಭವಾಗುತ್ತಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ.

₹60ಕ್ಕೆ ಒಂದು ದಿನದ ಪಂದ್ಯದ ಟಿಕೆಟ್!

ನವೆಂಬರ್ 14 ರಂದು ಆರಂಭವಾಗಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಟಿಕೆಟ್ ಮಾರಾಟ ಪ್ರಾರಂಭವಾಗಿದ್ದು, ದರಗಳು ಅಚ್ಚರಿ ಮೂಡಿಸಿವೆ. ಒಂದು ದಿನದ ಆಟಕ್ಕೆ ಟಿಕೆಟ್ ಬೆಲೆ ಕೇವಲ ₹60 ನಿಂದ ಆರಂಭವಾಗುತ್ತದೆ. ಐದು ದಿನಗಳ ಸಂಪೂರ್ಣ ಟೆಸ್ಟ್ ಪಂದ್ಯಕ್ಕೆ ಬೇಕಾದ ಟಿಕೆಟ್ ಕೇವಲ ₹300ಕ್ಕೆ ಲಭ್ಯವಾಗಲಿದೆ.

ಇನ್ನು, ಮೇಲ್ದರ್ಜೆಯ ಗ್ಯಾಲರಿ ಟಿಕೆಟ್‌ಗಳು ಒಂದು ದಿನಕ್ಕೆ ₹250 ಹಾಗೂ ಐದು ದಿನಗಳವರೆಗೆ ₹1250ಕ್ಕೆ ದೊರೆಯಲಿವೆ. ಕಡಿಮೆ ದರದಲ್ಲಿ ವಿಶ್ವ ದರ್ಜೆಯ ಟೆಸ್ಟ್ ಕ್ರಿಕೆಟ್‌ಗೆ ಸಾಕ್ಷಿಯಾಗಲು ಕೊಲ್ಕತ್ತಾ ಅಭಿಮಾನಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ.

ಸರಣಿಯ ವೇಳಾಪಟ್ಟಿ:
ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ನವೆಂಬರ್ 14 ರಿಂದ ಮೊದಲ ಟೆಸ್ಟ್ ಪಂದ್ಯ ಪ್ರಾರಂಭವಾಗಲಿದೆ. ನಂತರ ಎರಡನೇ ಟೆಸ್ಟ್ ಪಂದ್ಯವು ನವೆಂಬರ್ 22 ರಂದು ಗುವಾಹಟಿಯಲ್ಲಿ ನಡೆಯಲಿದೆ.

ಈ ಎರಡು ಟೆಸ್ಟ್ ಪಂದ್ಯಗಳ ನಡುವೆ, ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ನವೆಂಬರ್ 30 ರಿಂದ ಮುಖಾಮುಖಿಯಾಗಲಿವೆ. ಇದರ ನಂತರ ಡಿಸೆಂಬರ್ 9 ರಿಂದ 5 ಪಂದ್ಯಗಳ T20 ಸರಣಿ ನಡೆಯುವ ಮೂಲಕ ಪ್ರವಾಸವು ಕೊನೆಗೊಳ್ಳಲಿದೆ. ಈ ಸರಣಿಯು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂಪೂರ್ಣ ಮನರಂಜನೆಯನ್ನು ನೀಡಲು ಸಿದ್ಧವಾಗಿದೆ.

error: Content is protected !!