ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೋರ್ಚುಗಲ್ ದೇಶದಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಬುರ್ಖಾ ನಿಷೇಧ ಬಿಲ್‌ಗೆ ಸಂಸತ್ತು ಅನುಮೋದನೆ ನೀಡಿದೆ. ನಿಯಮ ಉಲ್ಲಂಘಿಸಿದರೆ 4 ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ.ಇಷ್ಟೇ ಅಲ್ಲ ಬುರ್ಖಾ ಧರಿಸಲು ಒತ್ತಾಯಿಸಿದರೆ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಬಿಲ್‌ನಲ್ಲಿ ಉಲ್ಲೇಖಿಸಲಾಗಿದೆ.
ಪೋರ್ಚುಗಲ್‌ನಲ್ಲಿ ಬುರ್ಖಾ, ಹಿಜಾಬ್ ನಿಷೇಧಿಸಲು ಹಲವು ಹೋರಾಟಗಳು ನಡೆದಿದೆ. ಇದೀಗ ಚೆಗಾ ಪಾರ್ಟಿ ಮಹತ್ವದ ಬಿಲ್ ಮಂಡಿಸಿದೆ. ಇದಕ್ಕೆ ಸಂಸತ್ತೂ ಅನುಮೋದನೆ ನೀಡಿದೆ. ಪ್ರಮುಖವಾಗಿ ಸಾರ್ವಜನಿಕ ಸ್ಥಳದಲ್ಲಿ ಬುರ್ಖಾ ನಿಷೇಧಿಸಲಾಗಿದೆ. ಇನ್ನು ಧಾರ್ಮಿಕ ಸ್ಥಳದಲ್ಲಿ ಹಿಜಾಬ್ ಧರಿಸಲು ಪ್ರಸ್ತಾವನೆಯಲ್ಲಿ ಅವಕಾಶ ನೀಡಲಾಗಿದೆ. ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಪೊರ್ಚುಗಲ್ ಸಂಸತ್ತಿನಲ್ಲಿ ಪಾಸ್ ಆದ ಬುರ್ಖಾ ನಿಷೇಧ ಬಿಲ್ ಇದೀಗ ಅಧ್ಯಕ್ಷ ಮಾರ್ಸೆಲೋ ರೆಬೆಲೋ ಡಿ ಸೌಸಾಗೆ ಕಳುಹಿಸಲಾಗಿದೆ. ಅಧ್ಯಕ್ಷರು ಸಹಿ ಮಾಡಿದ ಬಳಿಕ ಕಾನೂನಾಗಿ ಜಾರಿಯಾಗಲಿದೆ. ಅಧ್ಯಕ್ಷರು ಈ ಬಿಲ್‌ನ್ನು ಪರಿಶೀಲನೆಗಾಗಿ ಸಾಂವಿಧಾನಿಕ ಕೋರ್ಟ್‌ಗೆ ಕಳುಹಿಸುತ್ತಾರೆ. ಪರಿಶೀಲನೆ ಬಳಿಕ ಅಧ್ಯಕ್ಷರು ಸಹಿ ಮಾಡಿದರೆ ಶೀಘ್ರದಲ್ಲೇ ಕಾನೂನು ಆಗಿ ಜಾರಿಯಾಗಲಿದೆ. ಹೀಗಾದಲ್ಲಿ ಯುರೋಪಿಯನ್ ಕೆಲ ರಾಷ್ಟ್ರಗಳ ಬಳಿಕ ಇದೀಗ ಪೋರ್ಚುಗಲ್ ಕೂಡ ಬುರ್ಖಾ ಬ್ಯಾನ್ ಮಾಡಿದ ದೇಶ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಸಂಸತ್ತಿನಲ್ಲಿ ಬಿಲ್‌ಗೆ ವಿರೋಧ ವ್ಯಕ್ತಪಡಿಸಿದ ಎಡಪಂಥೀಯ ನಾಯಕರು
ಪೋರ್ಚುಗಲ್ ಸಂಸತ್ತಿನಲ್ಲಿ ಚೆಗಾ ಪಕ್ಷದ ನಾಯಕ ಆ್ಯಂಡ್ರೆ ವೆಂಟುರ ಬುರ್ಖಾ ಬ್ಯಾನ್ ಮಸೂದೆ ಮಂಡಿಸಿದ್ದರು. ಈ ವೇಳೆ ಎಡಪಂಥೀಯ ಪಕ್ಷದ ಕೆಲ ಮಹಿಳಾ ನಾಯಕಿಯರು ಈ ಬಿಲ್‌ಗೆ ವಿರೋಧ ವ್ಯಕ್ತಪಡಿಸಿದ್ದರು.