Saturday, August 30, 2025

SHOCKING | ನಿಯಂತ್ರಣ ತಪ್ಪಿ ನಿಲ್ದಾಣಕ್ಕೆ ನುಗ್ಗಿದ ಬಸ್: ಮಗು, ಸಹಿತ ಐವರು ಸ್ಥಳದಲ್ಲೇ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬ್ರೇಕ್ ವೈಫಲ್ಯಕ್ಕೊಳಗಾಗಿ ನಿಯಂತ್ರಣ ತಪ್ಪಿದ ಬಸ್ ನೇರ ಬಸ್ ನಿಲ್ದಾಣ ಒಳಗೆ ನುಗ್ಗಿದ ಪರಿಣಾಮ ಮಗು ಸಹಿತ ಐವರು ಸ್ಥಳದಲ್ಲಿಯೇ ಸಾವನ್ನಪ್ಪಿದ ಆಘಾತಕಾರಿ ಘಟನೆ ದಕ್ಷಿಣ ಕನ್ನಡ‌ ಕೇರಳ ಗಡಿ ಭಾಗವಾದ ತಲಪಾಡಿ ಎಂಬಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದೆ.

ಪ್ರಾಥಮಿಕ ಮಾಹಿತಿಗಳ ಪ್ರಕಾರ ಸಾವನ್ನಪ್ಪಿದವರ ಪೈಕಿ ಮೂವರು ಮಹಿಳೆಯರು ಹಾಗೂ ಒಬ್ಬ ಪುರುಷ ಹಾಗೂ ಒಂದು ಮಗು ಎಂದು ತಿಳಿದುಬಂದಿದ್ದು, ಇವರೆಲ್ಲರೂ ಒಂದೇ ಕುಟುಂಬದವರು ಎಂದು ಗೊತ್ತಾಗಿದೆ.

ಅಪಘಾತ ಸಂದರ್ಭ ಇವರು ರಿಕ್ಷಾವೊಂದರಲ್ಲಿ ಕುಳಿದ್ದರು.
ಇದೇ ಘಟನೆಯಲ್ಲಿ ಏಳು ಜನರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಜೇಶ್ವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ