ಹೊಸದಿಗಂತ ವರದಿ ಕುಮಟಾ:
ಬಹು ನಿರೀಕ್ಷಿತ ಹಾಗೂ ಬಹು ಜನರ ಬೇಡಿಕೆಯ ಕುಮಟಾ ಶಿರಸಿ ರಸ್ತೆ ಕಾಮಗಾರಿ ಬಹುತೇಕ ಅಂತಿಮ ಹಂತ ತಲುಪುತ್ತಿದ್ದು, ಈ ಹಿನ್ನೆಲೆಯಲ್ಲಿ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ ಓಡಾಟವನ್ನು ಈ ಮಾರ್ಗದಲ್ಲಿ ಪುನಃ ಆರಂಭಿಸುವಂತೆ ಬಹುಜನರ ಒತ್ತಡ ಬಂದ ಕಾರಣದಿಂದಾಗಿ ಶಾಸಕ ದಿನಕರ ಶೆಟ್ಟಿ ಮುತುವರ್ಜಿ ವಹಿಸಿ ಕಾರ್ಯ ಮಾಡಿದ್ದು, ಡಿ.30 ರಿಂದ ಬಸ್ ಓಡಾಟ ಪುನರಾರಂಭ ಮಾಡಲಾಗುತ್ತಿದೆ.
ಆರ್.ಎನ್. ಶೆಟ್ಟಿ ಕಂಪನಿಯ ಮೂಲಕ ದೇವಿಮನೆ ಘಟ್ಟದ ತಿರುವಿನವರೆಗೂ ರಸ್ತೆ ಕಾಮಗಾರಿ ಯಶಸ್ವಿಯಾಗಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ಶಾಸಕ ದಿನಕರ ಶೆಟ್ಟಿ ಜನಹಿತದ ದೃಷ್ಟಿಯಿಂದ ಮಹತ್ವದ ಕ್ರಮಕ್ಕೆ ಮುಂದಾಗಿದ್ದರು.
ಇದನ್ನೂ ಓದಿ:
ಶಾಸಕರು ಕೆಎಸ್‌ಆರ್‌ಟಿಸಿ ಮ್ಯಾನೇಜರ್ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಸಾರ್ವಜನಿಕರ ಬಹುಕಾಲದ ಬೇಡಿಕೆಯಾದ ಶಿರಸಿ–ಕುಮಟಾ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರವನ್ನು ಪುನರ್ ಆರಂಭಿಸಲು ಸ್ಪಷ್ಟ ಸೂಚನೆ ನೀಡಿದ್ದು ಈ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡಿರುವುದಾಗಿ ಮಾಹಿತಿ ಲಭ್ಯವಾಗಿದೆ.

