March 14, 2026
Saturday, March 14, 2026
spot_img

ಉದ್ಯಮ ಸ್ನೇಹಿ ಬಜೆಟ್.. ಅಭಿವೃದ್ಧಿಯ ಹಾದಿಗೆ ಸಿಕ್ಕಿದೆ ಹೊಸ ವೇಗ! ರಾಜೀವ್ ಮೆಮಾನಿ ಮೆಚ್ಚುಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಸಂಸತ್ತಿನಲ್ಲಿ 2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದರು. ಈ ಬಾರಿ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಬಂಡವಾಳ ವೆಚ್ಚವನ್ನು ಶೇ. 9 ರಷ್ಟು ಹೆಚ್ಚಿಸಿ ₹12.2 ಲಕ್ಷ ಕೋಟಿಗೆ ಏರಿಸಲಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಇದು ₹11.21 ಲಕ್ಷ ಕೋಟಿಯಾಗಿತ್ತು.

ಈ ಬಜೆಟ್ ಕುರಿತು ಭಾರತೀಯ ಕೈಗಾರಿಕಾ ಒಕ್ಕೂಟದ (CII) ಅಧ್ಯಕ್ಷ ರಾಜೀವ್ ಮೆಮಾನಿ ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. “ಈ ಬಜೆಟ್ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ (MSME) ಸೇರಿದಂತೆ ವಿವಿಧ ಕೈಗಾರಿಕೆಗಳ ಬೇಡಿಕೆಗಳನ್ನು ಪೂರೈಸಿದೆ. ತೆರಿಗೆ ಸರಳೀಕರಣ ಮತ್ತು ಸೇವಾ ವಲಯದತ್ತ ಸರ್ಕಾರ ಗಮನ ಹರಿಸಿರುವುದು ಸ್ವಾಗತಾರ್ಹ,” ಎಂದು ಅವರು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !