ಕಡಿಮೆ ಸಾಮಗ್ರಿಗಳಿಂದ, ಹೆಚ್ಚು ರುಚಿಕರ ಪಾಸ್ತಾ ತಯಾರಿಸಬೇಕೆಂದು ಬಯಸಿದರೆ ಬಟರ್ ಗಾರ್ಲಿಕ್ ಪಾಸ್ತಾ ಆಯ್ಕೆ. ಬೆಣ್ಣೆ–ಬೆಳ್ಳುಳ್ಳಿ ಸುವಾಸನೆಯ ಜೊತೆಗೆ ಮೃದುವಾದ ಪಾಸ್ತಾ ಮಿಶ್ರಣವಾದಾಗ ಅದ್ಭುತ ರುಚಿ ಸಿದ್ಧವಾಗುತ್ತದೆ. ಮಕ್ಕಳು, ದೊಡ್ಡವರು ಎಲ್ಲರೂ ಇಷ್ಟಪಡುವ ಈ ಡಿಶ್ 10–15 ನಿಮಿಷಗಳಲ್ಲಿ ತಯಾರಾಗುತ್ತದೆ.
ಬೇಕಾಗುವ ಸಾಮಗ್ರಿಗಳು
ಪಾಸ್ತಾ – 1 ಕಪ್
ಬೆಣ್ಣೆ – 2 ಟೇಬಲ್ ಸ್ಪೂನ್
ಸಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ – 6-7 ಕಳಿ
ಮೆಣಸಿನ ಪುಡಿ / ಚಿಲ್ಲಿ ಫ್ಲೇಕ್ಸ್ – 1 ಟೀ ಸ್ಪೂನ್
ಕಾಳುಮೆಣಸು ಪುಡಿ – ½ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ
ಚೀಸ್ – ಬೇಕಿದ್ದರೆ
ತಯಾರಿಸುವ ವಿಧಾನ
ಒಂದು ಪಾತ್ರೆಯಲ್ಲಿ ನೀರು ಹಾಕಿ ಕುದಿಸಿ, ಅದಕ್ಕೆ ಉಪ್ಪು ಸೇರಿಸಿ ಪಾಸ್ತಾವನ್ನು ಮೃದುವಾಗುವವರೆಗೆ ಬೇಯಿಸಿ. ಬೇಯಿಸಿದ ನಂತರ ನೀರು ತೆಗೆದು ಇಡಿ.
ಇನ್ನೊಂದು ಪ್ಯಾನಿನಲ್ಲಿ ಬೆಣ್ಣೆಯನ್ನು ಕರಗಿಸಿ ಸಣ್ಣಗೆ ಕಟ್ಟಿರಿಸಿದ ಬೆಳ್ಳುಳ್ಳಿಯನ್ನು ಹಾಕಿ ಚಿನ್ನದ ಬಣ್ಣಕ್ಕೆ ಬರುವವರೆಗೆ ಹುರಿಯಿರಿ. ಈಗ ಚಿಲ್ಲಿ ಫ್ಲೇಕ್ಸ್ ಮತ್ತು ಕಾಳುಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿರಿ.
ಈ ಮಿಶ್ರಣಕ್ಕೆ ಬೇಯಿಸಿದ ಪಾಸ್ತಾವನ್ನು ಹಾಕಿ ಮೃದುವಾಗಿ ಕಲಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಮತ್ತು ಚೀಸ್ ಹಾಕಿ ಬಿಸಿ ಬಿಸಿ ಸರ್ವ್ ಮಾಡಿ.

