Monday, November 24, 2025

ನಟಿ ರಕುಲ್‌ ಪ್ರೀತ್‌ ಸಿಂಗ್‌ ಹೆಸರಿನಲ್ಲಿ ಕಾಲ್‌, ಮೆಸೇಜ್‌! ಬಕ್ರಾ ಆಗಬೇಡಿ ಹುಷಾರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇತ್ತೀಚೆಗೆ ನಟಿಯರ ಹೆಸರಿನಲ್ಲಿ ನಕಲಿ ಸಾಮಾಕಿಜ ಜಾಲತಾಣಗಳ ಅಕೌಂಟ್‌ ಹಾಗೂ ಫೋನ್‌ ಕಾಲ್ಸ್‌ ಮೂಲಕ ಮೋಸ ಮಾಡಲಾಗುತ್ತಿದೆ. ಇದೇ ಸಾಲಿನಲ್ಲಿ ನಟಿ ರಕುಲ್‌ ಪ್ರೀತ್‌ ಸಿಂಗ್‌ ಕೂಡ ಸೇರಿದ್ದಾರೆ.

ಕುಲ್ ಪ್ರೀತ್ ಸಿಂಗ್ ಅವರ ಹೆಸರು ಹೇಳಿಕೊಂಡು ಕಿಡಿಗೇಡಿಗಳು ಎಲ್ಲರಿಗೂ ಮೆಸೇಜ್ ಮಾಡುತ್ತಿದ್ದಾರೆ. ಅದು ರಕುಲ್ ಪ್ರೀತ್ ಸಿಂಗ್ ಅವರ ಗಮನಕ್ಕೆ ಬಂದಿದೆ. ಆ ಬಗ್ಗೆ ಅವರು ಸ್ಕ್ರೀನ್ ಶಾಟ್ ಸಮೇತವಾಗಿ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.

8111067586 ಮೊಬೈಲ್ ಸಂಖ್ಯೆಯಿಂದ ಕಿಡಿಗೇಡಿ ಕೃತ್ಯ ಮಾಡಲಾಗಿದೆ. ವಾಟ್ಸಪ್ ಡಿಪಿಯಲ್ಲಿ ರಕುಲ್ ಪ್ರೀತ್ ಸಿಂಗ್ ಅವರ ಫೋಟೊವನ್ನು ಹಾಕಲಾಗಿದೆ. ಬಯೋ ವಿವರದಲ್ಲಿ ಅವರ ಸಿನಿಮಾ ಹೆಸರನ್ನು ಬರೆಯಲಾಗಿದೆ. ತಾನು ರುಕುಲ್ ಪ್​ರೀತ್ ಸಿಂಗ್ ಎಂದು ಹೇಳಿಕೊಂಡು ಹಲವರಿಗೆ ಈ ನಂಬರ್​ನಿಂದ ಮೆಸೇಜ್ ಕಳಿಸಲಾಗಿದೆ. ಆ ಮೂಲಕ ವಂಚಿಸಲು ಪ್ರಯತ್ನಿಸಲಾಗಿದೆ.

‘ಹಾಯ್ ಸ್ನೇಹಿತರೆ.. ಯಾರೋ ಒಬ್ಬರು ನನ್ನ ಹೆಸರಿನಲ್ಲಿ ಜನರಿಗೆ ವಾಟ್ಸಪ್ ಸಂದೇಶ ಕಳಿಸುತ್ತಿದ್ದಾರೆ. ದಯವಿಟ್ಟು ಗಮನಿಸಿ, ಇದು ನನ್ನ ನಂಬರ್ ಅಲ್ಲ. ಈ ನಂಬರ್ ಮೂಲಕ ಯಾವುದೇ ಮಾತುಕತೆ ನಡೆಸಬೇಡಿ. ದಯವಿಟ್ಟು ಬ್ಲಾಕ್ ಮಾಡಿ’ ಎಂದು ರಕುಲ್ ಪ್ರೀತ್ ಸಿಂಗ್ ಅವರು ಎಲ್ಲರಿಗೂ ಎಚ್ಚರಿಕೆ ನೀಡಿದ್ದಾರೆ. ಆ ಮೂಲಕ ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಲು ಅವರು ಪ್ರಯತ್ನಿಸಿದ್ದಾರೆ.

error: Content is protected !!