Thursday, November 13, 2025

Vastu | ವಾಸ್ತು ಪ್ರಕಾರ ಮನೆಯಲ್ಲಿ ಅಕ್ವೇರಿಯಂ ಇಡಬಹುದಾ? ಏನಾದ್ರು ತೊಂದ್ರೆ ಇದೆಯಾ?

ಬಹುತೇಕರಿಗೆ ಅಕ್ವೇರಿಯಂ ಅಂದರೆ ಕೇವಲ ಅಲಂಕಾರವಷ್ಟೇ ಅಲ್ಲ, ಮನಸ್ಸಿಗೆ ಶಾಂತಿ ನೀಡುವ ಒಂದು ಅಂಶ. ಬಣ್ಣ ಬಣ್ಣದ ಮೀನುಗಳು ನೀರಿನಲ್ಲಿ ತೇಲುತ್ತಿರುವುದು ದೃಷ್ಟಿಗೆ ಆನಂದ ನೀಡುತ್ತದೆ. ಮನಸ್ಸಿಗೆ ಶಾಂತಿ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಅಕ್ವೇರಿಯಂ ಇಡುವ ದಿಕ್ಕು, ಅದರೊಳಗಿನ ಮೀನುಗಳ ಸಂಖ್ಯೆ ಮತ್ತು ಅವುಗಳ ವಿಧವು ಮನೆಯ ಶಾಂತಿ, ಸಮೃದ್ಧಿ ಹಾಗೂ ಧನದ ಹರಿವಿನ ಮೇಲೆ ಪರಿಣಾಮ ಬೀರುತ್ತದೆ.

ಪೂರ್ವ ಅಥವಾ ಈಶಾನ್ಯ ದಿಕ್ಕು ಅತ್ಯುತ್ತಮ:

ವಾಸ್ತು ಪ್ರಕಾರ ಅಕ್ವೇರಿಯಂ ಅನ್ನು ಮನೆಯ ಅಥವಾ ಕಚೇರಿಯ ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡುವುದು ಅತ್ಯಂತ ಶುಭಕರ. ಈ ದಿಕ್ಕುಗಳು ಪಾಸಿಟಿವ್ ಶಕ್ತಿಯನ್ನು ತರಲು ಸಹಾಯಮಾಡುತ್ತವೆ.

ಉತ್ತರ ದಿಕ್ಕು ವೃತ್ತಿ ಅಭಿವೃದ್ಧಿಗೆ ಸಹಾಯಕ:

ಉತ್ತರ ದಿಕ್ಕಿನಲ್ಲಿ ಅಕ್ವೇರಿಯಂ ಇಟ್ಟರೆ ವೃತ್ತಿ ಜೀವನದಲ್ಲಿ ಪ್ರಗತಿ ಕಾಣಬಹುದು. ಹೊಸ ಅವಕಾಶಗಳು ದೊರಕುತ್ತವೆ ಮತ್ತು ಹಣದ ಹರಿವು ಸುಗಮವಾಗುತ್ತದೆ ಎಂದು ವಾಸ್ತು ನಂಬಿಕೆ.

ಮಲಗುವ ಕೋಣೆ ಮತ್ತು ಅಡುಗೆ ಮನೆಯಲ್ಲಿ ಇಡಬೇಡಿ:

ವಾಸ್ತು ಶಾಸ್ತ್ರದ ಪ್ರಕಾರ ಬೆಡ್ ರೂಮ್ ಅಥವಾ ಕಿಚನ್‌ನಲ್ಲಿ ಅಕ್ವೇರಿಯಂ ಇಡುವುದು ಅಶುಭ. ಇದರಿಂದ ಮನೆಯಲ್ಲಿ ಅಶಾಂತಿ ಮತ್ತು ನಕಾರಾತ್ಮಕತೆ ಹೆಚ್ಚಾಗುತ್ತದೆ.

8 ಗೋಲ್ಡನ್ ಮೀನು ಮತ್ತು 1 ಕಪ್ಪು ಮೀನು ಶುಭಕರ:

ಒಟ್ಟು 9 ಮೀನುಗಳ ಅಕ್ವೇರಿಯಂ ಅತ್ಯಂತ ಮಂಗಳಕರ. 8 ಗೋಲ್ಡನ್ ಫಿಶ್‌ಗಳ ಜೊತೆಗೆ ಒಂದು ಕಪ್ಪು ಮೀನು ಇರಿಸಿದರೆ ದುಷ್ಟ ಶಕ್ತಿಗಳು ದೂರವಾಗುತ್ತವೆ ಮತ್ತು ಧನ ಭಾಗ್ಯ ಹೆಚ್ಚುತ್ತದೆ ಎನ್ನಲಾಗಿದೆ.

ಅಕ್ವೇರಿಯಂ ಸ್ವಚ್ಛತೆ ಮತ್ತು ಬೆಳಕು ಮುಖ್ಯ:

ನೀರನ್ನು ನಿಯಮಿತವಾಗಿ ಬದಲಾಯಿಸಿ, ಅಕ್ವೇರಿಯಂ ಅನ್ನು ನೈಸರ್ಗಿಕ ಬೆಳಕಿನಲ್ಲಿ ಇಡಬೇಕು. ಶುದ್ಧ ನೀರು ಮತ್ತು ಬೆಳಕು ಮನೆಯ ಪಾಸಿಟಿವ್ ಎನರ್ಜಿ ಹೆಚ್ಚಿಸುತ್ತದೆ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)

error: Content is protected !!