ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೊಟ್ಟೆಯಿಂದ ಕ್ಯಾನ್ಸರ್ ವದಂತಿ ಬೆನ್ನಲ್ಲೇ ಆಹಾರ ಸುರಕ್ಷತಾ ಇಲಾಖೆ ಅಲರ್ಟ್ ಆಗಿದೆ. ಬೆಂಗಳೂರಿನಲ್ಲಿ 200ಕ್ಕೂ ಪ್ರದೇಶಗಳಿಂದ ಮೊಟ್ಟೆ ಸಂಗ್ರಹ ಮಾಡಿ ಲ್ಯಾಬ್‌ಗೆ ರವಾನೆ ಮಾಡಲಾಗ್ತಿದೆ.
ಸೂಪರ್ ಮಾರ್ಕೆಟ್, ಪೌಲ್ಟ್ರಿ ಅಂಗಡಿ ಸೇರಿದಂತೆ ವಿವಿಧ ಬ್ರ್ಯಾಂಡ್‌ಗಳ ಮೊಟ್ಟೆಯನ್ನ ಸಂಗ್ರಹ ಮಾಡಿ, ಲ್ಯಾಬ್‌ಗೆ ರವಾನೆ ಮಾಡಲಾಗಿದೆ. ಇದಾದ 15 ರಿಂದ 20 ದಿನಗಳಲ್ಲಿ ವರದಿ ಹೊರಬೀಳಲಿದೆ.
ಈ ಸಂಬಂಧ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿ, ಮೊಟ್ಟೆ ಸಂಗ್ರಹ ಮಾಡಿ ಟೆಸ್ಟ್‌ಗೆ ಕಳಿಸಿದ್ದಾರೆ. ಗುಣಮಟ್ಟ ಪರೀಕ್ಷೆ ಮಾಡ್ತಾರೆ. ಗುಣಮಟ್ಟ ರಿಪೋರ್ಟ್ ಬಂದ ಮೇಲೆ ಮುಂದಿನ ನಿರ್ಧಾರ ಮಾಡುತ್ತೇವೆ. ಸದ್ಯಕ್ಕೆ ಜನ ಆತಂಕ ಪಡೋದು ಬೇಡ ಎಂದಿದ್ದಾರೆ. ಇತ್ತ, ಆಹಾರ ತಜ್ಞರೂ ಕೂಡ ಮೊಟ್ಟೆ ತಿಂದರೆ ಕ್ಯಾನ್ಸರ್ ಬರುತ್ತೆ ಅನ್ನೋದು ತಪ್ಪು. ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಅಂಶ ಇದ್ದರೆ ಆ ಮೊಟ್ಟೆ ಸೇವನೆ ಮಾಡಿದ್ರೆ ಅಪಾಯ. ಮೊಟ್ಟೆ ಎನ್ನುವುದು ಪೌಷ್ಠಿಕಾಂಶವಾಗಿದ್ದು, ಅದು ಮನುಷ್ಯ ದೇಹಕ್ಕೆ ಮುಖ್ಯ. ಎಲ್ಲಾ ಮೊಟ್ಟೆಯಲ್ಲೂ ಕ್ಯಾನ್ಸರ್ ಕಾರಕ ಇರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು, ಪೌಲ್ಟ್ರಿ ಅಸೋಸಿಯೇಷನ್ ಅಧ್ಯಕ್ಷ ನಾಗರಾಜ್ ಪ್ರತಿಕ್ರಿಯಿಸಿ, ಉತ್ತರ ಭಾರತದಲ್ಲಿ ಈ ರೀತಿಯ ವದಂತಿಯನ್ನ ಹಬ್ಬಿಸಲಾಗಿದೆ. ಇದು ಶುದ್ಧ ಸುಳ್ಳು. ಯಾವುದೇ ಲ್ಯಾಬ್‌ನಿಂದ ಇದು ಸಾಬೀತು ಆಗಿಲ್ಲ. ಸುಳ್ಳು ವದಂತಿಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಸ್ಪಷ್ಟನೆ ನೀಡಿದ್ದಾರೆ. ಇದೆಲ್ಲದರ ಮಧ್ಯೆ ಸಾರ್ವಜನಿಕರೂ ಕೂಡ ಯಾವುದೇ ವದಂತಿಗಳಿಗೆ ಕಿವಿಗೊಡದೇ ತಿನ್ನಿ. ಮೊಟ್ಟೆಯಿಂದ ಯಾವುದೇ ತೊಂದರೆಯಿಲ್ಲ ಅಂತಿದ್ದಾರೆ.

