ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರದುರ್ಗದ ಚಿಕ್ಕಜಾಜೂರಿನಲ್ಲಿ ಪತಿಯೊಬ್ಬ ಪತ್ನಿಯ ತಲೆಗೆ ಹೊಡೆದು ಕೊಂದಿ*ದ್ದಾರೆ. ಅನುಮಾನದ ಭೂತಕ್ಕೆ ಶರಣಾದ ಪತಿ ರವಿಕುಮಾರ್ ಪತ್ನಿ ಮಮತಾರನ್ನು ಕೊ*ಲೆ ಮಾಡಿದ್ದಾರೆ.
ರವಿಕುಮಾರ್‌ಗೆ ಕ್ಯಾನ್ಸರ್ ಸಮಸ್ಯೆಯಿದ್ದು ಪತ್ನಿ ಮಮತಾ ಮನೆಯ ಎಲ್ಲ ಕೆಲಸಗಳನ್ನು, ಪತಿಯ ಆರೈಕೆಯನ್ನು ಮಾಡುತ್ತಿದ್ದರು. ಇಡೀ ಊರು ಈ ಜೋಡಿಯನ್ನು ನೋಡಿ ಹೆಮ್ಮೆಪಟ್ಟಿದ್ದರು. ಆದರೆ ಪತಿ-ಪತ್ನಿ ನಡುವೆ ಆಸ್ತಿ ಮಾರಾಟ ಹಾಗೂ ಸಾಲದ ಬಗ್ಗೆ ಜಗಳ ನಡೆದಿತ್ತು. ಇದಲ್ಲದೆ ಮಮತಾಗೆ ಅಕ್ರಮ ಸಂಬಂಧ ಇತ್ತು ಎಂದು ಪತಿ ಹೇಳಿಕೊಂಡಿದ್ದಾರೆ.
ಇದೇ ಕಾರಣದಿಂದಾಗಿ ಕೊಲೆ ಮಾಡಿದ್ದೇನೆ ಎಂದು ಪೊಲೀಸರ ಬಳಿ ಸತ್ಯ ಒಪ್ಪಿಕೊಂಡಿದ್ದಾನೆ. ಇದಕ್ಕೂ ಮುನ್ನ ಫೈಲ್ ಹುಡುಕುವಾಗ ನೆಲಕ್ಕೆ ಬಿದ್ದು ತಲೆಗೆ ಪೆಟ್ಟಾಗಿ ಪತ್ನಿ ಮೃತಪಟ್ಟಿದ್ದಳು ಎಂದು ಪತಿ ರವಿಕುಮಾರ್ ಕಥೆ ಕಟ್ಟಿದ್ದ ಎನ್ನಲಾಗಿದೆ.
ಕ್ಯಾನ್ಸರ್ ಪೀಡಿತ ಪತಿಗೆ ಪತ್ನಿ ಮೇಲೆ ಅನುಮಾನ, ಸಿಟ್ಟಿನಲ್ಲಿ ಭೀಕರ ಹ*ತ್ಯೆ
ಸಾಂದರ್ಭಿಕ ಚಿತ್ರ



