January22, 2026
Thursday, January 22, 2026
spot_img

ಕೆಂಪು ಕೋಟೆ ಸಮೀಪ ಕಾರು ಸ್ಫೋಟ: ಒರ್ವ ಸಾವು, ದೆಹಲಿಯಲ್ಲಿ ಹೈಅಲರ್ಟ್ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರ ರಾಜಧಾನಿ ಕೆಂಪು ಕೋಟೆ ಚಾಂದಿನಿ ಚೌಕ್ ಬಳಿಯ ಮೆಟ್ರೋ ನಿಲ್ದಾಣದ ಬಳಿ ಕಾರು ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಎರಡು ಕಾರುಗಳು ಭಸ್ಮವಾಗಿದೆ. ಇತರ ಮೂರು ಕಾರುಗಳಿಗೆ ಬೆಂಕಿ ಹೊತ್ತಿಕೊಂಡಿದೆ.

ಕಾರಿನಲ್ಲಿ ಸ್ಫೋಟಕವಿಟ್ಟು ಬ್ಲಾಸ್ಟ್ ಮಾಡಿರುವ ಅನುಮಾನಗಳು ವ್ಯಕ್ತವಾಗುತ್ತಿದೆ. ಮೇಲ್ನೋಟಕ್ಕೆ ಭಯೋತ್ಪಾದಕರ ಕೃತ್ಯ ಎಂದು ವರದಿಗಳು ಹೇಳುತ್ತಿದೆ. ದೆಹಲಿ ಕಾರು ಸ್ಫೋಟದಲ್ಲಿ ಆರಂಭದಲ್ಲಿ ಓರ್ವ ಮೃತಪಟ್ಟಿರುವುದು ವರದಿಯಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆ ದಾಖಲಿಸಲಾಗಿದೆ. ಪೊಲೀಸರು ಸಂಪೂರ್ಣ ಪ್ರದೇಶ ಸುತ್ತುವರಿದು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಗ್ನಿಶಾಮಕ ದಳದ ಹಲವು ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ.ದೆಹಲಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಕಾರಿನ ಸಿಎನ್‌ಜಿ ಕಿಟ್ ಸ್ಪೋಟಗೊಂಡಿರುವ ಅನುಮಾನಗಳು ವ್ಯಕ್ತವಾಗಿದೆ. ಆದರೆ ಘಟನೆಗೆ ಸ್ಪಷ್ಟ ಕಾರಣ ಲಭ್ಯವಾಗಿಲ್ಲ.

Must Read