ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್‌ಗಢದ ಬೆಮೆತಾರ ಜಿಲ್ಲೆಯಲ್ಲಿ ಮಂಗಳವಾರ ಮಿನಿ ಸರಕು ವಾಹನವೊಂದು ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಕಾರ್ಮಿಕರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡ ಘಟನೆ ನಡೆದಿದೆ.
ಬಲಿಯಾದವರೆಲ್ಲರೂ ಪಶ್ಚಿಮ ಬಂಗಾಳದ ಬೆಮೆತಾರದಲ್ಲಿರುವ ಫ್ಲವರ್ ಡೆಕೋರೇಷನ್ ಅಂಗಡಿಯ ಕೆಲಸಗಾರರಿಗಿದ್ದು, ಡೆಕೋರೇಷನ್ ಮುಗಿಸಿ ನೆರೆಯ ಕಬೀರ್ಧಾಮ್ ಜಿಲ್ಲೆಯಿಂದ ಹಿಂತಿರುಗುತ್ತಿದ್ದರು ಎಂದು ತಿಳಿದುಬಂದಿದೆ.
ಕರೇಸಾರ ಬಳಿ ಮುಂಜಾನೆ ಈ ಅಪಘಾತ ಸಂಭವಿಸಿದ್ದು, ವಿರುದ್ಧ ದಿಕ್ಕಿನಿಂದ ವೇಗವಾಗಿ ಬರುತ್ತಿದ್ದ ಟ್ರಕ್ ಸರಕು ವಾಹನಕ್ಕೆ ಡಿಕ್ಕಿ ಹೊಡೆದಿದೆ. ಮೃತರನ್ನು ಪಶ್ಚಿಮ ಬಂಗಾಳದ ಪಶ್ಚಿಮ ಮೇದಿನಿಪುರ ಜಿಲ್ಲೆಯ ನಿವಾಸಿಗಳಾದ ಪಂಕಜ್ ರಜಪೂತ್ (35), ಗೋಪಾಲ್ ಸಿಂಗ್ (35) ಮತ್ತು ಪ್ರಶಾಂತ ಧಾರ (25) ಎಂದು ಗುರುತಿಸಲಾಗಿದೆ.
ಗಾಯಗೊಂಡವರನ್ನು ವಾಹನ ಚಲಾಯಿಸುತ್ತಿದ್ದ ಬೆಮೆತಾರದ ಅಜಯ್ ವಿಶ್ವಕರ್ಮ (22) ಮತ್ತು ಪಶ್ಚಿಮ ಬಂಗಾಳದ ಶುಭಶಿಶ್ ಚಕ್ರವರ್ತಿ (42) ಎಂದು ಗುರುತಿಸಲಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

