April 11, 2026
Saturday, April 11, 2026
spot_img

ಹೂಡಿಕೆದಾರರಿಗೆ 10 ಕೋಟಿ ವಂಚಿಸಿದ ಆರೋಪ: ಗಾಯಕಿ ಮಂಗ್ಲಿ ವಿರುದ್ಧ ಕೇಸ್ ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೆಲುಗಿನ ಜಾನಪದ ಗಾಯಕಿ ಮಂಗ್ಲಿ ಅವರ ವಿರುದ್ಧ ವಂಚನೆ ಆರೋಪ ಕೇಳಿಬಂದಿದ್ದು, ಹೈದರಾಬಾದ್​ನ ಪುಂಜಗುಟ್ಟ ಪೊಲೀಸ್​ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಅಡ್ವೊಕೇಟ್ ಸುಬ್ಬರಾವ್ ಅವರು ದೂರಿನಲ್ಲಿ ಮಂಗ್ಲಿ ಹಾಗೂ ಅವರ ಸಹೋದರ, ಹಲವಾರು ಹೂಡಿಕೆದಾರರಿಗೆ 10 ಕೋಟಿ ವಂಚಿಸಿದ್ದಾರೆ ಎಂದು ಆರೋಪ ಮಾಡಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿದ್ದಾರೆ.

ಮೈಕ್ರೋ ಫಿನಾನ್ಸ್ ಹೆಸರಿನಲ್ಲಿ 100ಕ್ಕೂ ಅಧಿಕ ಮಂದಿಗೆ ಹೂಡಿಕೆ ಮಾಡಿ ಅಧಿಕ ದುಡ್ಡು ಕೊಡಿಸುವುದಾಗಿ ಹೇಳಿ ವಂಚಿಸಿದ್ದಾರೆ. ಇದನ್ನು ನಂಬಿ ಅನೇಕರು ಹಣ ನೀಡಿದ್ದರು. ಆದರೆ ಮಾತುಕೊಟ್ಟಂತೆ ಲಾಭವೂ ಇಲ್ಲ, ಕೊಟ್ಟ ಹಣವೂ ಸಿಕ್ಕಿಲ್ಲ ಎಂದು ಆರೋಪಿಸಿದ್ದಾರೆ.

ಬಳಿಕ ಕೊಟ್ಟ ಹಣ ವಾಪಸ್ ಕೇಳಿದ ವೇಳೆ ಕೊಲೆ ಬೆದರಿಕೆಗಳು ಬಂದಿವೆ. ಹೀಗಾಗಿ ತಮ್ಮ ಜೀವಕ್ಕೆ ಅಪಾಯವಿದೆ ಎಂದು ವಕೀಲ ಸುಬ್ಬರಾವ್ ದೂರು ನೀಡಿದ್ದಾರೆ.

ದೂರಿನ ಆಧಾರದ ಮೇಲೆ, ಪಂಜಾಗುಟ್ಟ ಪೊಲೀಸರು ಮಂಗ್ಲಿ, ಆಕೆಯ ಸಹೋದರ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದು, ತನಿಖೆಯನ್ನು ಪ್ರಾರಂಭಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !