Sunday, September 21, 2025

ಸೆ.22 ರಿಂದ ಅ.07 ರವರೆಗೆ ಜಾತಿ ಜನಗಣತಿ ಸಮೀಕ್ಷೆ ಆರಂಭ: ಸರ್ಕಾರದಿಂದ ಅಧಿಕೃತ ಆದೇಶ ಪ್ರಕಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೆ.22 ರಿಂದ ಅ.07 ರವರೆಗೆ ಜಾತಿ ಜನಗಣತಿ ಸಮೀಕ್ಷೆ ನಡೆಸಲಾಗುವುದು ಎಂದು ಸರ್ಕಾರ ಅಧಿಕೃತ ಆದೇಶ ಪ್ರಕಟಿಸಿದೆ.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಕುರಿತು ಸಮೀಕ್ಷೆ ನಡೆಸಲಾಗುತ್ತಿದ್ದು ಸಮೀಕ್ಷೆಗೆ ಸಿದ್ಧರಿರುವಂತೆ ರಾಜ್ಯದ ಜನತೆಗೆ ತಿಳಿಸಲಾಗಿದೆ.

ಸರ್ಕಾರದ ಸಚಿವರಲ್ಲೇ ಜಾತಿ ಜನಗಣತಿಯ ಬಗ್ಗೆ ಗೊಂದಲ ಎದ್ದ ಕಾರಣ ಜಾತಿ ಜನಗಣತಿ ನಡೆಯುತ್ತದೆಯೋ ಇಲ್ವೋ ಎಂಬ ಗೊಂದಲ ಎದ್ದಿತ್ತು. ಆದರೆ ಈಗ ಸರ್ಕಾರವೇ ಅಧಿಕೃತ ಆದೇಶ ಪ್ರಕಟಿಸುವ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದೆ.

ಇದನ್ನೂ ಓದಿ