April 4, 2026
Saturday, April 4, 2026
spot_img

ಬೆಂಗಳೂರಿನಲ್ಲಿ ಸಿಸಿಬಿ ಹದ್ದಿನ ಕಣ್ಣು: 272 ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶದ ವಲಸಿಗರನ್ನು ಪತ್ತೆಹಚ್ಚುವ ಮತ್ತು ಅವರನ್ನು ಸ್ವದೇಶಕ್ಕೆ ಕಳುಹಿಸುವ ಪ್ರಕ್ರಿಯೆಯನ್ನು ಸಿಸಿಬಿ ಪೊಲೀಸರು ಚುರುಕುಗೊಳಿಸಿದ್ದಾರೆ.

ಈ ವಿಶೇಷ ಕಾರ್ಯಾಚರಣೆಯ ಮೂಲಕ ಈವರೆಗೆ ಒಟ್ಟು 272 ಅಕ್ರಮ ವಲಸಿಗರನ್ನು ಗಡಿಪಾರು ಮಾಡಲಾಗಿದೆ. ಇದರಲ್ಲಿ 178 ಪುರುಷರು, 94 ಮಹಿಳೆಯರು ಹಾಗೂ 12 ಮಕ್ಕಳು ಸೇರಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕಾ ಕ್ರಮವಾಗಿ ಇವರನ್ನು ತ್ರಿಪುರಾ ಗಡಿಯ ಮೂಲಕ ಗಡಿ ಭದ್ರತಾ ಪಡೆ ನೆರವಿನೊಂದಿಗೆ ಬಾಂಗ್ಲಾದೇಶಕ್ಕೆ ಕಳುಹಿಸಿಕೊಡಲಾಗುತ್ತಿದೆ.

ಕೇವಲ ವಲಸಿಗರನ್ನು ಪತ್ತೆಹಚ್ಚುವುದು ಮಾತ್ರವಲ್ಲದೆ, ಇವರನ್ನು ಅಕ್ರಮವಾಗಿ ದೇಶದೊಳಗೆ ನುಸುಳಿಸುತ್ತಿದ್ದ ಜಾಲವನ್ನೂ ಪೊಲೀಸರು ಭೇದಿಸಿದ್ದಾರೆ. ಈ ಕೃತ್ಯದಲ್ಲಿ ಮೂರು ಹಂತದ ಏಜೆಂಟ್‌ಗಳು ಕಾರ್ಯನಿರ್ವಹಿಸುತ್ತಿದ್ದರು:

ಮೊದಲನೇ ಏಜೆಂಟ್ ಬಾಂಗ್ಲಾದೇಶದ ಗಡಿಯವರೆಗೆ ಜನರನ್ನು ಕರೆತರುತ್ತಿದ್ದ. ಎರಡನೇ ಏಜೆಂಟ್ ಭಾರತದ ಗಡಿ ದಾಟಿಸಿ ಒಳಗೆ ಕರೆದುಕೊಳ್ಳುತ್ತಿದ್ದ. ಮೂರನೇ ಏಜೆಂಟ್ ಭಾರತದ ವಿವಿಧೆಡೆ ಕೆಲಸ ಹುಡುಕಿಕೊಡುವ ಜವಾಬ್ದಾರಿ ಹೊತ್ತಿದ್ದ.

ಸದ್ಯ ಈ ಏಜೆಂಟ್‌ಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !