January17, 2026
Saturday, January 17, 2026
spot_img

‘Celebrate responsibly’ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ನೂತನ ಅಭಿಯಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರು ನಗರದ ನಾಗರಿಕರು ಹೊಸವರ್ಷದ ಸಂಭ್ರಮಾಚರಣೆಯನ್ನು ಜಾಗೃತಿ, ಕಾಳಜಿ ಮತ್ತು ಸುರಕ್ಷತೆಯೊಂದಿಗೆ ಜವಾಬ್ದಾರಿಯುತವಾಗಿ ಆಚರಿಸುವಂತೆ ನಗರ ಪೊಲೀಸರು ಅಭಿಯಾನವನ್ನು ಪ್ರಾರಂಭಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರೇಟ್‌ ರೆಸ್ಪಾಸಿಬ್ಲಿ (ಜವಾಬ್ದಾರಿಯಿಂದ ಆಚರಿಸೋಣ) ಎಂಬ ಶೀರ್ಷಿಕೆಯಡಿ ಅಭಿಯಾನವನ್ನು ಇಂದು ಆರಂಭಿಸಿರುವ ನಗರ ಪೊಲೀಸ್‌‍ ಆಯುಕ್ತರು ಮತ್ತು ಇಲಾಖೆಯ ಇತರೆ ಅಧಿಕಾರಿಗಳು ನಾಗರಿಕರ ಸುರಕ್ಷತೆಗಾಗಿ ಕೆಲವು ಸಲಹಾ ಸೂಚನೆಗಳನ್ನು ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಈ ಬಗ್ಗೆ ಮಾಹಿತಿ ನೀಡಿ,ನಗರದ ಎಲ್ಲಾ ನಾಗರಿಕರು ಸಂಪೂರ್ಣವಾಗಿ ಸಹಕರಿಸಬೇಕು. ಮತ್ತು ಕರ್ತವ್ಯದಲ್ಲಿರುವ ಪೊಲೀಸ್‌‍ ಅಧಿಕಾರಿಗಳು ನೀಡುವ ಮಾರ್ಗಸೂಚಿಗಳು, ಸಲಹಾ ಸೂಚನೆಗಳನ್ನು ಪಾಲಿಸಬೇಕೆಂದು ಮನವಿ ಮಾಡಿದ್ದಾರೆ.

ಜನ ದಟ್ಟಣೆ ಉಂಟಾದ ಸಂದರ್ಭದಲ್ಲಿ ಮೀಸಲಿಟ್ಟ ಸ್ಥಳದಲ್ಲಿ ಅವರುಗಳನ್ನು ತಡೆದು ಕಾಯ್ದಿರಿಸುವ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ.ಅವಧಿ ಮೀರಿದ ಸಂದರ್ಭದಲ್ಲಿ ಸಾರ್ವಜನಿಕರು ತಮ ಮನೆಗಳಿಗೆ ಹಿಂತಿರುಗಲು ನಮ ಮೆಟ್ರೋದ ಅವಧಿಯನ್ನು ವಿಸ್ತರಿಸಲಾಗಿದೆ. ಬಸ್‌‍, ಆಟೋರಿಕ್ಷಾ ಮತ್ತು ಕ್ಯಾಬ್‌ಗಳ ಸಂಖ್ಯೆಗಳನ್ನು ಸಹ ಹೆಚ್ಚಿಸಲಾಗುವುದು.

ನಿಷೇದಿತ ಮಾದಕ ವಸ್ತುಗಳ ಮತ್ತು ನಾರ್ಕೋಟಿಕ್‌ ಪದಾರ್ಥಗಳ ಬಳಕೆಯು ನಿಷಿದ್ದವಾಗಿದ್ದು ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮಾದಕ ವಸ್ತು ಸೇವನೆ ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

Must Read

error: Content is protected !!