January17, 2026
Saturday, January 17, 2026
spot_img

ಸೆಲಬ್ರೇಷನ್‌ ಮೋಡ್‌ ಆನ್‌ : ನೀವು ತಿನ್ನೋ ಕೇಕ್‌ನಲ್ಲಿದೆ ʼಕಲರ್‌ಫುಲ್‌ʼ ರೋಗಗಳು, ಹುಷಾರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇನ್ನೇನು ಕ್ರಿಸ್‌ಮಸ್‌ ಹಾಗೂ ಕ್ಯಾಲೆಂಡರ್‌ ಹೊಸ ವರ್ಷಾಚರಣೆ ಆರಂಭವಾಗಲಿದೆ. ಈ ಎಲ್ಲ ಸೆಲೆವ್ರೇಷನ್‌ಗಳಿಗಾಗಿ ಸಾಕಷ್ಟು ಕೇಕ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ಈ ಕೇಕ್‌ಗಳನ್ನು ಬಣ್ಣ ಬಣ್ಣವಾಗಿಸೋದಕ್ಕೆ ಕೃತಕ ಬಣ್ಣಗಳನ್ನು ಬಳಕೆ ಮಾಡಲಾಗುತ್ತದೆ. ಈ ಬಣ್ಣಗಳಿಂದಾಗಿ ಆರೋಗ್ಯ ಹದಗೆಡೋದು ಪಕ್ಕ. ಕಳೆದ ವರ್ಷ ನಡೆದ ಪರೀಕ್ಷೆ ವೇಳೆ ಕೆಲವು ಕೇಕ್ ಸ್ಯಾಂಪಲ್ಸ್ ಅನ್ ಸೇಫ್ ಆಗಿರೋದು ಬಯಲಾಗಿತ್ತು. ಹೀಗಾಗಿ ಈ ಬಾರಿಯೂ ಆಹಾರ ಇಲಾಖೆ ಈ ವೆರೈಟಿ ಕೇಕ್​​ಗಳ ಮೇಲೆ ಕಣ್ಣಿಟ್ಟಿದೆ. ಕೇಕ್​​ಗಳ ತಯಾರಿ ವೇಳೆ ರಾಸಾಯನಿಕಯುಕ್ತ ಬಣ್ಣಗಳ ಬಳಕೆ ತಡೆಗೆ ಕ್ರಮಕ್ಕೆ ಮುಂದಾಗಿದೆ.

ಕಲರ್‌ಫುಲ್‌ ಕೇಕ್‌ ತಿನ್ನೋದ್ರಿಂದ ಏನು ಸಮಸ್ಯೆ?

ಅಲರ್ಜಿ, ಅಸ್ತಮಾ, ಜೀರ್ಣಕ್ರಿಯೆಯಲ್ಲಿ ಸಮಸ್ಯೆ, ತಲೆನೋವು, ಅಲರ್ಜಿ, ಮಕ್ಕಳಲ್ಲಿ ಹೈಪರ್ ಆ್ಯಕ್ಟಿವಿಟಿ, ಕ್ರೋಮೋಸೋಮ್ ಡ್ಯಾಮೇಜ್, ಥೈರಾಯ್ಡ್ ಸಮಸ್ಯೆ, ಆನ್‌ಸೈಟಿ ಸಮಸ್ಯೆ, ಮಕ್ಕಳ ವರ್ತನೆಯಲ್ಲಿ ಬದಲಾವಣೆ, ಅಲರ್ಜಿ, ಅಸ್ತಮಾ ಸಮಸ್ಯೆ ಸಾಧ್ಯತೆ, ಸ್ಕಿನ್ ರಾಶಸ್, ಶ್ವಾಸಕೋಶದ ಸಮಸ್ಯೆ, ಮೈಗ್ರೇನ್, ಡಿಪ್ರೆಶನ್, ದೃಷ್ಟಿ ಸಂಬಂಧಿತ ಸಮಸ್ಯೆ, ನಿದ್ರಾಹೀನತೆ , ಗ್ಯಾಸ್ಟ್ರಿಕ್ ಸಮಸ್ಯೆ, ಹೈಪರ್ ಸೆನ್ಸಿಟಿವಿಟಿ, ಚರ್ಮದ ಊತ, ಉಸಿರಾಟದ ಸಮಸ್ಯೆಗಳು ಬಾಧಿಸುತ್ತವೆ.

Must Read

error: Content is protected !!