March 16, 2026
Monday, March 16, 2026
spot_img

ನಟ ರಾಮ್ ಚರಣ್ ಮನೆಯಲ್ಲಿ ಸಂಭ್ರಮ: ಎರಡನೇ ಮಗುವಿನ ನಿರೀಕ್ಷೆಯಲ್ಲಿ ಸೌತ್ ಕಪಲ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ತೆಲುಗಿನ ಸ್ಟಾರ್ ನಟ ರಾಮ್ ಚರಣ್ ಮತ್ತು ಉಪಾಸನಾ ದಂಪತಿ ಮದುವೆಯಾದ 11 ವರ್ಷಗಳ ಬಳಿಕ ಅಂದರೆ 2023 ರಲ್ಲಿ ಪೋಷಕರಾದರು. ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಮಗುವಿಗೆ ಕ್ಲಿನ್ ಕಾರಾ ಎಂದು ಹೆಸರಿಡಲಾಗಿದೆ. ಇದೀಗ ಈ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಅಸಲಿಗೆ ರಾಮ್ ಚರಣ್ ದಂಪತಿ ಮಗುವೇ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದರು. ಈ ಬಗ್ಗೆ ಉಪಾಸನಾ ಒಮ್ಮೆ ಬಹಿರಂಗವಾಗಿ ಮಾತನಾಡಿದ್ದರು. ಸದ್ಗುರುಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ಉಪಾಸನಾ, ತಮಗೆ ಮಗು ಮಾಡಿಕೊಳ್ಳುವ ಇಚ್ಛೆ ಇಲ್ಲ ಆದರೆ ನನ್ನ ತಾಯಿ ಮತ್ತು ಅತ್ತೆ ಬಲವಂತ ಮಾಡುತ್ತಿದ್ದಾರೆ ಎಂದಿದ್ದರು. ಆದರೆ ಕೊನೆಗೆ ಕೌಟುಂಬಿಕ ಒತ್ತಾಯಕ್ಕೆ ಮಣಿದು, 2023 ರಲ್ಲಿ ಹೆಣ್ಣು ಮಗುವಿಗೆ ತಾಯಿ ಆದರು. ಮೊದಲ ಮಗುವಾದ ಎರಡನೇ ವರ್ಷದಲ್ಲಿ ಈಗ ಎರಡನೇ ಮಗುವಿಗೆ ತಯಾರಾಗಿದ್ದಾರೆ ದಂಪತಿ.

ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ಉಪಾಸನಾ, ಈ ದೀಪಾವಳಿ ನಮ್ಮ ಮನೆಯಲ್ಲಿ ಡಬಲ್ ಧಮಾಕ. ಡಬಲ್ ಖುಷಿ, ಡಬಲ್ ಆಶೀರ್ವಾದ ಎಂದಿದ್ದಾರೆ. ಗರ್ಭಿಣಿ ಆಗಿರುವ ಉಪಾಸನಾ ಅವರ ಸೀಮಂತವನ್ನು ರಾಮ್ ಚರಣ್ ಅವರ ನಿವಾಸದಲ್ಲಿ ನೆರವೇರಿಸಲಾಗಿದೆ. ರಾಮ್ ಚರಣ್ ಅವರ ಕುಟುಂಬದವರು, ಉಪಾಸನಾ ಅವರ ಕುಟುಂಬದವರು ಎಲ್ಲರೂ ಸೇರಿ ಉಪಾಸನಾ ಅವರ ಸೀಮಂತ ಕಾರ್ಯ ನೆರವೇರಿಸಿದ್ದಾರೆ. ಚಿರಂಜೀವಿ, ರಾಮ್ ಚರಣ್ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಹಾಜರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !