ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ಮೋದಿಯ ಮೋಡಿಯೇ ಅಂಥದ್ದು! ಇಂದು ಕೃಷ್ಣನಗರಿ ಉಡುಪಿಗೆ ಮೋದಿ ಆಗಮಿಸಿದ್ದು, ಸಹಸ್ರಾರು ಅಭಿಮಾನಿಗಳು ಒಂದು ಝಲಕ್‌ಗಾಗಿ ಎದುರು ನೋಡಿದ್ದರು.
ಇದರಲ್ಲಿ ಶತಾಯುಷಿ ಅಜ್ಜಿಯೂ ಇದ್ದರು. ಹೌದು, 103 ವರ್ಷದ ಶಿವಮ್ಮ ಮಲೆನಾಡು ಶಿವಮೊಗ್ಗದಿಂದ ಉಡುಪಿಗೆ ಪ್ರಯಾಣ ಬೆಳೆಸಿ ಪ್ರಧಾನಿ ಮೋದಿಯನ್ನು ಕಣ್ತುಂಬಿಕೊಂಡಿದ್ದಾರೆ.
ಪ್ರಧಾನಿ ಮೋದಿ ಉಡುಪಿಯಲ್ಲಿ ಲಕ್ಷ ಕಂಠ ಗೀತಾ ಪಾರಾಯಣ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಪ್ರಧಾನಿ ಮೋದಿಯನ್ನು ನೋಡಲು ರಾಜ್ಯದ ಎಲ್ಲಾ ಸ್ಥಳಗಳಿಂದಲೂ ಅಭಿಮಾನಿಗಳು ಆಗಮಿಸಿದ್ದರು.
ಪ್ರಧಾನಿ ಮೋದಿ ನೋಡಲು ಮಲೆನಾಡಿನಿಂದ ಕೃಷ್ಣನಗರಿಗೆ ಬಂದ ಶತಾಯುಷಿ ಅಜ್ಜಿ

