ಹೊಸ ದಿಗಂತ ವರದಿ,ಮಡಿಕೇರಿ:
ರಾಷ್ಟ್ರೀಯ ಸ್ವಯಂಸೇವಕ ಸಂಘದ 100ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಮಡಿಕೇರಿ ನಗರದಲ್ಲಿ ಸಂಘದ ಘೋಷ್ ಸಹಿತ ಪಥಸಂಚಲನ ಭಾನುವಾರ ನಡೆಯಿತು.
ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ನೂರಾರು ಸ್ವಯಂಸೇವಕರು ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಸಂಪತಗೊಂಡು ಅಲ್ಲಿಂದ ಜೂನಿಯರ್ ಕಾಲೇಜ್ ಮುಂಭಾಗ, ಚೌಕ್, ಗಣಪತಿ ಬೀದಿ, ಮಹದೇವಪೇಟೆ, ಹಳೆ ಖಾಸಗಿ ಬಸ್ ನಿಲ್ದಾಣ, ಜನರಲ್ ತಿಮ್ಮಯ್ಯ ವೃತ್ತಕ್ಕಾಗಿ ಗಾಂಧಿ ಮೈದಾನದಲ್ಲಿ ಸಮಾವೇಶ ಗೊಂಡರು.
ಬಳಿಕ ಅಲ್ಲಿ ಸಂಘದ ಪ್ರಾರ್ಥನೆ ಮತ್ತು ಧ್ವಜವಂದನೆಯೊಂದಿಗೆ ಪಥಸಂಚಲನ ಕೊನೆಗೊಂಡಿತು.
ಈ ಸಂದರ್ಭ ಆರ್ ಎಸ್ ಎಸ್ ನ ಜಿಲ್ಲಾ ಸಂಘ ಚಾಲಕ್ ಚಕ್ಕೇರ ಮನು ಕಾವೇರಪ್ಪ, ಜಿಲ್ಲಾ ಕಾರ್ಯವಾಹ ರವಿ ಕುಶಾಲಪ್ಪ, ಸಹಕಾರ್ಯವಾಹ ಕುಟ್ಟಂಡ ಮಿರನ್ ಕಾವೇರಪ್ಪ, ಮಂಗಳೂರು ವಿಭಾಗ ಸಹಕಾರ್ಯವಾಹ ಸುಭಾಷ್, ವಿಭಾಗ ಶಾರೀರಿಕ್ ಪ್ರಮುಖ್ ಡಿ.ಕೆ ಡಾಲಿ, ವಿಭಾಗ ಸಹಸಂಪರ್ಕ ಪ್ರಮುಖ್ ಕುಟ್ಟಂಡ ಪ್ರಿನ್ಸ್ ಗಣಪತಿ, ಜಿಲ್ಲಾ ಪ್ರಮುಖರಾದ ಕೆ.ಕೆ. ದಿನೇಶ್ ಕುಮಾರ್, ಕೆ. ಕೆ. ಮಹೇಶ್ ಕುಮಾರ್, ಅರುಣ್ ಕುಮಾರ್, ಮಾಜಿ ಶಾಸಕ ಕೆ.ಜಿ ಬೋಪಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಲನ್ ಕುಮಾರ್ ಸೇರಿದಂತೆ ನೂರಾರು ಸ್ವಯಂಸೇವಕರು ಇದ್ದರು.