ಹೊಸದಿಗಂತ ಡಿಜಿಟಲ್ ಡೆಸ್ಕ್;
ದಿನದಿಂದ ದಿನಕ್ಕೆ ಬಿಎಂಟಿಸಿ ಬಸ್ಗಳಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕಳೆದ ಒಂದು ವರ್ಷದಲ್ಲಿ ಬಿಎಂಟಿಸಿ ಬಸ್ ಅಪಘಾತಗಳಲ್ಲಿ 44 ಜನ ಪ್ರಾಣ ಕಳೆದುಕೊಂಡಿದ್ದರೆ, ಕಳೆದ ಒಂದು ತಿಂಗಳಲ್ಲಿ 7 ಜನ ಪ್ರಾಣ ಕಳೆದುಕೊಂಡಿದ್ದಾರೆ.
ಬಿಎಂಟಿಸಿ ಸಾಕಷ್ಟು ಬಸ್ಸುಗಳಲ್ಲಿ ಹಾರ್ನ್ ಇಲ್ಲ, ಇಂಜಿನ್ ಸಮಸ್ಯೆ, ಗೇರ್ ಬಾಕ್ಸ್ ಬ್ರೇಕ್, ಕ್ಲಚ್ ಪ್ಯಾಡ್, ಹೀಗೆ ನಾನಾ ರೀತಿಯ ಸಮಸ್ಯೆ ಗಳಿದ್ದು, ಹೊಸ ಬಸ್ಗಳಿಂದ ಅಪಘಾತಗಳ ಸಂಖ್ಯೆ ಕಡಿಮೆ ಆಗಲಿದೆ ಎಂದು ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ.
ಇದೀಗ 4500 ಹೊಸ ಬಸ್ಗಳನ್ನು ಬಿಎಂಟಿಸಿಗೆ ನೀಡಲು ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಈ ವರ್ಷದ ಕೊನೆ ಅಥವಾ ಮುಂದಿನ ವರ್ಷ ಆರಂಭದಿಂದ ಹೊಸ ಬಸ್ಗಳು ಬಿಎಂಟಿಸಿ ಸೇರಲಿವೆ. ಈ 4500 ಹೊಸ ಬಸ್ಗಳು ಬರುತ್ತಿದ್ದಂತೆಯೇ ಬಿಎಂಟಿಸಿಯ ಹಳೆಯ ಬಸ್ಗಳು ಗುಜರಿ ಸೇರಲಿವೆ.