Friday, October 3, 2025

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಜಂಬೂಸವಾರಿಗೆ ವಿಧ್ಯುಕ್ತ ತೆರೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಗೆ ಅದ್ಧೂರಿ ತೆರೆ ಬಿದ್ದಿದೆ. 6ನೇ ಬಾರಿಗೆ ಅಭಿಮನ್ಯು ಯಶಸ್ವಿಯಾಗಿ ಜಂಬೂಸವಾರಿ ನಡೆಸಿದ್ದು, ಎಲ್ಲಾ ಕಾರ್ಯಗಳು ಯಶಸ್ಸು ಕಂಡಿದೆ.

ಎಲ್ಲವೂ ಕೂಡ ಸಾಂಪ್ರದಾಯಿಕವಾಗಿ ಮತ್ತು ಯಶಸ್ವಿಯಾಗಿ ಪೂರ್ಣಗೊಂಡಿದೆ. ಕಳೆದ 11 ದಿನಗಳಿಂದ ಮೈಸೂರಿನಲ್ಲಿ ನಡೆದ ದಸರಾ ಮಹೋತ್ಸವ ಸಂಪನ್ನವಾಗಿದೆ. 22ನೇ ತಾರೀಖು ವಿಜೃಂಭಣೆಯಿಂದ ಆರಂಭಗೊಂಡಿದ್ದ ದಸರಾ ಅನೇಕ ಅದ್ಧೂರಿ ಕಾರ್ಯಕ್ರಮಗಳೊಂದಿಗೆ ಸಾಗಿ, ಯಶಸ್ವಿ ಜಂಬೂಸವಾರಿಯೊಂದಿಗೆ ತೆರೆ ಬಿದ್ದಿದೆ.

ಗುರುವಾರ (ಅ.2) ವಿಜಯದಶಮಿ ಹಿನ್ನೆಲೆ ಕಲಾ ತಂಡಗಳು ಮತ್ತು ಆನೆ ಮೆರವಣಿಗೆ ಬಳಿಕ 4.41ಕ್ಕೆ ಸಿಎಂ ಮತ್ತು ಗಣ್ಯರು ಜಂಬೂಸವಾರಿಗೆ ಚಾಲನೆ ನೀಡಿದರು. ಕ್ಯಾಪ್ಟನ್ ಅಭಿಮನ್ಯು 6ನೇ ಬಾರಿಗೆ ಯಶಸ್ವಿಯಾಗಿ ಜಂಬೂಸವಾರಿ ಹೊತ್ತು ತನ್ನ ಜವಾಬ್ದಾರಿ ನಿಭಾಯಿಸಿದ್ದಾನೆ. ಮುಂದಿನ ನಾಲ್ಕೈದು ದಿನ ನಗರದಲ್ಲಿ ದಸರಾ ಕಲರವ ಮುಂದುವರೆಯಲಿದೆ. ಲೈಟಿಂಗ್ ಸೇರಿದಂತೆ ಹಲವು ಕಾರ್ಯಗಳು ಈ ವಾರ ಪೂರ್ತಿ ಮುಂದುವರೆಯಲಿದೆ.