Wednesday, November 5, 2025

ರಕ್ಷಣಾ ಪಡೆಗಳು ಯುದ್ಧಕ್ಕೆ ಸಿದ್ಧವಾಗಬೇಕಿದ್ದರೆ ಮಿಲಿಟರಿ ತರಬೇತಿಯಲ್ಲಿ ಬದಲಾವಣೆ ಅಗತ್ಯ: ಏರ್‌ಚೀಪ್ ಮಾರ್ಷಲ್ ಎ.ಪಿ. ಸಿಂಗ್


ಹೊಸದಿಗಂತ ಡಿಜಿಟಲ್ ಡೆಸ್ಕ್:


ಬೆಂಗಳೂರು ರಕ್ಷಣಾ ಪಡೆಗಳು ಯುದ್ಧಕ್ಕೆ ಸಿದ್ಧವಾಗಲು ಮಿಲಿಟರಿ ತರಬೇತಿಯಲ್ಲಿ ಬದಲಾವಣೆ ಅಗತ್ಯ ಎಂದು ವಾಯುಪಡೆ ಮುಖ್ಯಸ್ಥ ಏರ್‌ಚೀಪ್ ಮಾರ್ಷಲ್ ಎ.ಪಿ. ಸಿಂಗ್ ತಿಳಿಸಿದ್ದಾರೆ.


ಬೆಂಗಳೂರಿನಲ್ಲಿಂದು ನಡೆದ ತರಬೇತಿ ಕಮಾಂಡರ್‌ಗಳ ಸಮ್ಮೇಳನ ೨೦೨೫ರ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ವಿಷಯ ತಿಳಿಸಿದ್ದಾರೆ.


ಸಮ್ಮೇಳನದಲ್ಲಿ ತರಬೇತಿ ತತ್ವಶಾಸ್ತ್ರದ ಪರಿವರ್ತನೆ, ಮೂಲಸೌಕರ್ಯದ ಆಧುನೀಕರಣ, ಭಾರತೀಯ ವಾಯುಪಡೆಯ ವಿಕಸನಗೊಳ್ಳುತ್ತಿರುವ ಕಾರ್ಯಾಚರಣೆಯ ಅಗತ್ಯಗಳಿಗೆ ಅನುಗುಣವಾಗಿ ಬೋಧನಾ ಪದ್ಧತಿಗಳ ಅಳವಡಿಕೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಿತು.


ಕಾರ್ಯಕ್ರಮದಲ್ಲಿ ವಾಯುಪಡೆಯ ಕೇಂದ್ರಗಳಿಗೆ ಟ್ರೋಫಿಗಳನ್ನು ಪ್ರದಾನ ಮಾಡಿದ ಏರ್ ಚೀಫ್ ಮಾರ್ಷಲ್ ಪ್ರೈಡ್ ಆಫ್ ದಿ ಟ್ರೈನಿಂಗ್ ಕಮಾಂಡ್ ಟ್ರೋಫಿಯನ್ನು ವಾಯುಪಡೆ ಅಕಾಡೆಮಿಗೆ ನೀಡಿದರು.

error: Content is protected !!