ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಟ್ರಂಪ್ ಆಪ್ತ, ಚಾರ್ಲಿ ಕಿರ್ಕ್ ಸಾವು ಎಲ್ಲರಿಗೂ ಶಾಕ್ ನೀಡಿದ್ದುಮ್ ಅದರಲ್ಲೂ ಅವರ ಅಚಾನಕ್ ಸಾವಿನಿಂದ ಅವರ ಪತ್ನಿಯೂ ಆಘಾತಗೊಂಡಿದ್ದಾರೆ.
ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳನ್ನು ಹೊಂದಿರುವ ಚಾರ್ಲಿ ಕಿರ್ಕ್ ಅವರನ್ನು ಉತಾಹ್ ವ್ಯಾಲಿ ವಿವಿಯಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಶೂಟರ್ ಓರ್ವ ಗುಂಡಿಕ್ಕಿ ಹತ್ಯೆ ಮಾಡಿದ್ದ. ರಾಷ್ಟ್ರೀಯವಾದಿ ಚಿಂತನೆಗಳನ್ನು ಹೊಂದಿದ್ದ ಚಾರ್ಲಿ ಕಿರ್ಕ್, ಡೊನಾಲ್ಡ್ ಟ್ರಂಪ್ ಅತ್ಯಾಪ್ತನಾಗಿದ್ದು, ಟ್ರಂಪ್ ಚಿಂತನೆಗಳ ಪ್ರಬಲ ಪ್ರತಿಪಾದಕನಾಗಿದ್ದ, ಚಾರ್ಲಿ ಕಿರ್ಕ್ ಅವರ ಹಠಾತ್ ಸಾವು ಸ್ವತಃ ಟ್ರಂಪ್ ಅವರಿಗೆ ವೈಯಕ್ತಿಕವಾಗಿಯೂ ಆಘಾತ ನೀಡಿದ್ದು, ದೇಶದಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಿ ಹಾರಿಸುವುದರ ಜೊತೆಗೆ ದೇಶದಲ್ಲಿ ನಾಲ್ಕು ದಿನಗಳ ಶೋಕಚಾರಣೆ ಘೋಷಿಸಿದ್ದರು.
ಇದೀಗ ಅವರ ಪತ್ನಿ ಎರಿಕಾ ಕಿರ್ಕ್ ಅವರು ಚಾರ್ಲಿ ಕಿರ್ಕ್ ಅವರಿಗೆ ಅಂತಿಮ ನಮನ ಸಲ್ಲಿಸಿದ್ದು, ಪತಿಯ ತೆರೆದ ಶವ ಪೆಟ್ಟಿಗೆಯೇ ಮೇಲೆ ಬಿದ್ದು ಕಣ್ಣೀರಿಟ್ಟಿದ್ದಾರೆ.
ಎರಿಕಾ ಕಿರ್ಕ್ ಅವರ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಭಾವುಕ ದೃಶ್ಯವನ್ನು ಪೋಸ್ಟ್ ಮಾಡಲಾಗಿದ್ದು, ತನ್ನ ಪತಿಗೆ ಅಂತಿಮ ಸಲ್ಲಿಸುತ್ತಾ ಭಾವುಕ ಬರಹವನ್ನು ಎರಿಕಾ ಬರೆದುಕೊಂಡಿದ್ದಾರೆ.
ಪತಿಯ ಶವದ ಮೇಲೆ ಬಿದ್ದು ಬಿಕ್ಕಿಬಿಕ್ಕಿ ಅತ್ತ ಎರಿಕಾ ಕೊನೆಯದಾಗಿ ಚಾರ್ಲಿ ಕಿರ್ಕ್ ಕೈಗಳನ್ನು ತಮ್ಮ ಕೈಗಳಿಂದ ಹಿಡಿದುಕೊಂಡರು. ಈ ಪ್ರಪಂಚ ಕೆಟ್ಟದು, ಆದರೆ ನಮ್ಮ ರಕ್ಷಕ, ನಮ್ಮ ದೇವರು, ಅವನು ಅವನು ತುಂಬಾ ಒಳ್ಳೆಯವನು, ನನಗೆ ಹೇಳಿಕೊಳ್ಳುವುದಕ್ಕೆ ಯಾವುದೇ ಪದಗಳಿಲ್ಲ, ಈ ವಿಧವೆಯ ಅಳುವ ಶಬ್ದವು ಈ ಪ್ರಪಂಚದಾದ್ಯಂತ ಯುದ್ಧದ ಕೂಗಿನಂತೆ ಪ್ರತಿಧ್ವನಿಸುತ್ತದೆ. ಇದರಲ್ಲಿ ಯಾವುದರ ಅರ್ಥವೂ ನನಗೆ ತಿಳಿದಿಲ್ಲ. ಆದರೆ ಬೇಬಿ, ನಿನಗೆ ಅರ್ಥವಾಗಿದೆ ಎಂದು ನನಗೆ ತಿಳಿದಿದೆ ಮತ್ತು ನಮ್ಮ ಕರ್ತನಿಗೂ ಸಹ ತಿಳಿದಿದೆ. ಚಾರ್ಲಿಯ ಹೆಂಡತಿಯ ಮನಸ್ಸಿನೊಳಗೆ ಅವರು ಏನು ಹೊತ್ತಿಸಿದ್ದಾರೆಂದು ಅವರಿಗೆ ತಿಳಿದಿಲ್ಲ. ನನ್ನ ಗಂಡನ ಧ್ಯೇಯವು ಈಗ ದೊಡ್ಡದಾಗಿದೆ ಎಂದು ಅವರು ಭಾವಿಸಿದ್ದರೆ.. ನಿಮಗೆ ತಿಳಿದಿಲ್ಲ.ನೀವು, ನೀವೆಲ್ಲರೂ ಎಂದಿಗೂ ಆಗುವುದಿಲ್ಲ. ಎಂದಿಗೂ ನನ್ನ ಗಂಡನನ್ನು ಮರೆಯುವುದಿಲ್ಲ, ನಾನು ಅದನ್ನು ಖಚಿತಪಡಿಸಿಕೊಳ್ಳುತ್ತೇನೆ.ದೇವರ ತೋಳುಗಳಲ್ಲಿ ಶಾಂತವಾಗಿರಿ ಆತ ನಿಮಗೆ ಬೆಡ್ಸಿಟ್ ಹಾಸುತ್ತಾನೆ ಹಾಗೂ ಅವನು, ನಿಮ್ಮ ಹೃದಯ ಯಾವಾಗಲೂ ಕೇಳಲು ಹಾತೊರೆಯುವ, ‘ನನ್ನ ಒಳ್ಳೆಯ ಮತ್ತು ನಂಬಿಗಸ್ತ ಸೇವಕ ಚೆನ್ನಾಗಿ ಮಾಡಿದೆ ಎಂದು ಹೇಳಿ ನಿಮ್ಮನ್ನು ಸಮಾಧಾನಿಸುತ್ತಾನೆ ಎಂದು ಎರಿಕಾ ಬರೆದುಕೊಂಡಿದ್ದಾರೆ.
ಎರಿಕಾ ಹಾಗೂ ಚಾರ್ಲಿ ಕಿರ್ಕ್ ಅವರು 2021ರಲ್ಲಿ ಮದುವೆಯಾಗಿದ್ದರು. ಇವರಿಗೆ ಮೂರು ವರ್ಷದ ಒಬ್ಬ ಮಗಳು ಹಾಗೂ ಒಂದು ವರ್ಷದ ಮಗನಿದ್ದಾರೆ.
ಚಾರ್ಲಿ ಕಿರ್ಕ್ ಅಂತ್ಯಸಂಸ್ಕಾರ ಸೆಪ್ಟೆಂಬರ್ 21ರಂದು ಅರಿಜೋನಾದಲ್ಲಿ ನಡೆಯಲಿದೆ ಎಂದು ವರದಿಯಾಗಿದೆ. ಈ ಕಾರ್ಯಕ್ರಮದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಅಮೆರಿಕಾದ ಗಣ್ಯರು ಭಾಗಿಯಾಗಲಿದ್ದಾರೆ. ಅರಿಜೋನಾದಲ್ಲಿಯೇ ಅವರು ಅವರ ಪತ್ನಿ ಹಾಗೂ ಮಕ್ಕಳೊಂದಿಗೆ ವಾಸಿಸುತ್ತಿದ್ದರು.