Saturday, October 4, 2025

ಹೇಗಿದೆ ನೋಡಿ ಹಾರ್ದಿಕ್ ಪಾಂಡ್ಯ ಹೊಸ ಲುಕ್: ಹೇರ್ ಸ್ಟೈಲ್ ಗೆ ನೆಟ್ಟಿಗರು ಫಿದಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಷ್ಯಾ ಕಪ್ 2025 ಸನ್ನಿಹದಲ್ಲಿರುವಂತೆಯೇ ಭಾರತದ ಸ್ಟಾರ್ ಆಟಗಾರ ಹಾರ್ದಿಕ್ ಪಾಂಡ್ಯ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಸ್ವತಃ ಪಾಂಡ್ಯ ಅವರೇ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹೊಸ ಹೇರ್​​ಸ್ಟೈಲ್​ನೊಂದಿಗಿನ ನ್ಯೂ ಲುಕ್​ ಫೋಟೋ ಶೇರ್ ಮಾಡಿದ್ದಾರೆ. ಫೋಟೋ ಶೇರ್ ಮಾಡಿರೋ ಪಾಂಡ್ಯ New me ಅಂತಾ ಕ್ಯಾಪ್ಷನ್ ಹಾಕಿದ್ದಾರೆ.

ಪಾಂಡ್ಯ ಅವರ ನೂತನ ಕೇಶ ವಿನ್ಯಾಸಕ್ಕೆ ನೆಟ್ಟಿಗರು ಫಿದಾ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು ಪಾಂಡ್ಯ ಅವರನ್ನು ಬೆನ್ ಸ್ಟೋಕ್ಸ್ ಮತ್ತು ನಿಕೋಲಸ್ ಪೊರನ್ ಅವರಿಗೆ ಹೋಲಿಕೆ ಮಾಡಿದ್ದಾರೆ.