ಹೊಸದಿಗಂತ ಡಿಜಿಟಲ್ ಡೆಸ್ಕ್:
16.40 ಕೋಟಿ ರೂ. ಪರ್ಸ್ನೊಂದಿಗೆ 2026ರ ಐಪಿಎಲ್ ಮಿನಿ ಹರಾಜಿಗೆ ಎಂಟ್ರಿಕೊಟ್ಟಿದ್ದ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ತನ್ನ ಬಳಗಕ್ಕೆ 8 ಆಟಗಾರರನ್ನು ಖರೀದಿಸುವ ಮೂಲಕ ತಂಡವನ್ನು ಮತ್ತಷ್ಟು ಬಲಪಡಿಸಿದೆ. 2015 ರ ಆವೃತ್ತಿಯಲ್ಲಿ ತಂಡ ಹಾಲಿ ಚಾಂಪಿಯನ್ ಆಗಿದ್ದರೂ, ತಂಡದ ಪರ ಹೆಚ್ಚು ಪರಿಣಾಮಕಾರಿಯಾಗದ ಆಟಗಾರರನ್ನು ಕೈಬಿಟ್ಟಿದ್ದ ಆರ್ಸಿಬಿ, ಈ ಮಿನಿ ಹರಾಜಿನಲ್ಲಿ ಯಾರನ್ನು ಖರೀದಿಸಲಿದೆ ಎಂಬುದು ಎಲ್ಲರ ಕುತೂಹಲ ಮೂಡಿಸಿತ್ತು. ಅದರಂತೆ ತಂಡಕ್ಕೆ ಅವಶ್ಯಕವಿರುವ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿರುವ ಆರ್ಸಿಬಿ 6 ಭಾರತೀಯ ಆಟಗಾರರನ್ನು ಮತ್ತು ಇಬ್ಬರು ವಿದೇಶಿ ಆಟಗಾರನನ್ನು ತಂಡಕ್ಕೆ ಸೇರಿಸಿಕೊಂಡಿದೆ. ಯಾರವರು?
ವೆಂಕಟೇಶ್ ಅಯ್ಯರ್- 7 ಕೋಟಿ ರೂ.
ಮಂಗೇಶ್ ಯಾದವ್- 5.2 ಕೋಟಿ ರೂ.
ಜಾಕೋಬ್ ಡಫಿ- 2 ಕೋಟಿ ರೂ.
ಸಾತ್ವಿಕ್ ದೇಸ್ವಾಲ್- 30 ಲಕ್ಷ ರೂ.
ಜೋರ್ಡಾನ್ ಕಾಕ್ಸ್- 75 ಲಕ್ಷ ರೂ.
ವಿಕ್ಕಿ ಒಸ್ತ್ವಾಲ್- 30 ಲಕ್ಷ ರೂ.
ಕಾನಿಷ್ಕ್ ಚೌಹಾಣ್- 30 ಲಕ್ಷ ರೂ.
ವಿಹಾನ್ ಮಲ್ಹೋತ್ರಾ- 30 ಲಕ್ಷ ರೂ.

