ಚ್ಯೂಯಿಂಗ್ ಗಮ್ (Chewing Gum) ಜಗಿಯುವ ಅಭ್ಯಾಸ ಅನೇಕರಿಗೆ ಇದೆ. ಕೆಲವರು ಸಮಯ ಕಳೆಯಲು, ಇನ್ನು ಕೆಲವರು ಬಾಯಿ ದುರ್ವಾಸನೆ ಹೋಗಿಸಲು ಬಳಸುತ್ತಾರೆ. ಆದರೆ ತಜ್ಞರ ಎಚ್ಚರಿಕೆ ಪ್ರಕಾರ, ಅತಿಯಾದ ಚ್ಯೂಯಿಂಗ್ ಗಮ್ ಸೇವನೆ ಆರೋಗ್ಯಕ್ಕೆ ಹಾನಿಕಾರಕ. ಆಗೊಮ್ಮೆ ಈಗೊಮ್ಮೆ ತಿಂದರೆ ಅಪಾಯವಿಲ್ಲದಿದ್ದರೂ, ದಿನನಿತ್ಯ ಹೆಚ್ಚು ಜಗಿಯುವುದು ದೇಹದ ಮೇಲೆ ದುಷ್ಪರಿಣಾಮ ಉಂಟುಮಾಡುತ್ತದೆ.

ದೀರ್ಘಕಾಲ ಬಬಲ್ ಗಮ್ ಜಗಿಯುವುದರಿಂದ ದವಡೆ ಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಕಿವಿ ನೋವು ಮತ್ತು ತಲೆನೋವು ಉಂಟಾಗುವ ಸಾಧ್ಯತೆಯೂ ಇದೆ. ಇದರಿಂದ ಮಕ್ಕಳಿಗೆ ಹೆಚ್ಚಾಗಿ ತಿನ್ನುವ ಅಭ್ಯಾಸ ಬೆಳೆಯದಂತೆ ಪೋಷಕರು ಕಣ್ಣಿಟ್ಟಿರಬೇಕು.
ಚ್ಯೂಯಿಂಗ್ ಗಮ್‌ನಲ್ಲಿ ಸಾಮಾನ್ಯವಾಗಿ ಸಕ್ಕರೆ ಮತ್ತು ಅನೇಕ ರಾಸಾಯನಿಕ ಅಂಶಗಳು ಸೇರಿರುತ್ತವೆ. ಇದರ ಅತಿಯಾದ ಸೇವನೆ ಹಲ್ಲಿನ ಮೇಲಿನ ಎನಾಮಲ್ ಹಾನಿಯಾಗಲು ಕಾರಣವಾಗುತ್ತದೆ. ಇದರಿಂದ ಹಲ್ಲು ಹಾಳಾಗುವುದು, ದೇಹದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾಗುವುದು, ಜೀರ್ಣಕ್ರಿಯೆಯ ಅಸ್ವಸ್ಥತೆ ಉಂಟಾಗುವುದು ಸಾಮಾನ್ಯ. ಗ್ಯಾಸ್, ಹೊಟ್ಟೆ ಉಬ್ಬಿಕೊಳ್ಳುವುದು ಕೂಡ ಕಂಡುಬರುತ್ತದೆ.

ಅಷ್ಟೇ ಅಲ್ಲದೆ, ಕೆಲವು ರಾಸಾಯನಿಕ ಅಂಶಗಳು ದೀರ್ಘಾವಧಿಯಲ್ಲಿ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು ಎಂಬ ಎಚ್ಚರಿಕೆಯನ್ನು ತಜ್ಞರು ನೀಡಿದ್ದಾರೆ.