ಚಳಿಗಾಲ ಬಂತು ಅಂದ್ರೆ ಮಕ್ಕಳಿಗೆ ಶೀತ–ಕೆಮ್ಮು, ಜ್ವರ ಎನ್ನುವ ಪದಗಳು ಮನೆಮಾತಾಗಿಬಿಡುತ್ತವೆ. ಅದರಲ್ಲೂ ಐದು ವರ್ಷದೊಳಗಿನ ಮಕ್ಕಳ ರೋಗನಿರೋಧಕ ಶಕ್ತಿ ಇನ್ನೂ ಸಂಪೂರ್ಣವಾಗಿ ಬೆಳೆದಿರೋದಿಲ್ಲ. ಹೀಗಾಗಿ ಸಣ್ಣ ನಿರ್ಲಕ್ಷ್ಯವೂ ಅನಾರೋಗ್ಯಕ್ಕೆ ಕಾರಣವಾಗಬಹುದು. ಆದರೆ ಸ್ವಲ್ಪ ಜಾಗರೂಕತೆ ವಹಿಸಿದರೆ ಈ ಸಮಸ್ಯೆಗಳನ್ನು ಬಹುಮಟ್ಟಿಗೆ ತಡೆಯಬಹುದು. ಮಕ್ಕಳನ್ನು ಆರೋಗ್ಯವಾಗಿಡಲು ಪೋಷಕರು ಪಾಲಿಸಬೇಕಾದ ಪ್ರಮುಖ ವಿಷಯಗಳು ಇಲ್ಲಿವೆ.
ಚಳಿಯಿಂದ ರಕ್ಷಿಸಲು ಸ್ವೆಟರ್, ಟೋಪಿ, ಸಾಕ್ಸ್ ಧರಿಸಿ. ಮಕ್ಕಳ ದೇಹ ಸದಾ ಬೆಚ್ಚಗಿರಲಿ.
ಸ್ವಲ್ಪ ಜೀರಿಗೆ ಹಾಕಿ ಕುದಿಸಿದ ನೀರಿಗೆ ತುಳಸಿ ಎಸಳು ಸೇರಿಸಿ ಕೊಟ್ಟರೆ ಜೀರ್ಣಕ್ರಿಯೆ ಉತ್ತಮವಾಗುತ್ತದೆ.
ಬಿಸ್ಕೆಟ್, ಚಿಪ್ಸ್ ಬದಲು ಡ್ರೈ ಫ್ರೂಟ್ಸ್, ಮನೆಯಲ್ಲಿ ಮಾಡಿದ ತಿಂಡಿ ನೀಡಿ.
ಸಣ್ಣ ಶೀತಕ್ಕೆ ಆಂಟಿಬಯೋಟಿಕ್ ಕೊಡಬೇಡಿ. ವೈದ್ಯರ ಸಲಹೆ ಅವಶ್ಯ.
ಹೊರಾಂಗಣ ಆಟಗಳು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಉತ್ತಮ.
ತೆಂಗಿನೆಣ್ಣೆ ಅಥವಾ ಸಾಸಿವೆ ಎಣ್ಣೆಯಿಂದ ಮಸಾಜ್ ಮಾಡಿದರೆ ಚರ್ಮ ಒಣಗುವುದಿಲ್ಲ.
ಇದನ್ನೂ ಓದಿ: ಕೆಲಸ ಪಡೆಯೋಕ್ಕಾಗಿ ಪಾಕ್ ರಾಷ್ಟ್ರೀಯತೆ ಮುಚ್ಚಿಟ್ಟಿದ್ದ ಶಿಕ್ಷಕಿ ವಿರುದ್ಧ ಎಫ್‌ಐಆರ್ ದಾಖಲು
ಮಕ್ಕಳಿಗೆ ದಿನಕ್ಕೆ ಕನಿಷ್ಠ 8–10 ಗಂಟೆ ನಿದ್ದೆ ಅಗತ್ಯ.
ಮಲಗುವ ಮೊದಲು ಅರಿಶಿಣ ಹಾಕಿದ ಹಾಲು ಕೊಡಿ. ಇದು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ಮನೆ, ಆಟಿಕೆಗಳು ಸ್ವಚ್ಛವಾಗಿರಲಿ. ಸೊಳ್ಳೆ ಕಾಟ ತಪ್ಪಿಸಲು ಜಾಗರೂಕತೆ ವಹಿಸಿ.

