Friday, January 9, 2026

Child Care | ಮಕ್ಕಳ ಬೆಳವಣಿಗೆ ಸರಿಯಾಗಿದ್ಯಾ ಅಂತ ತಿಳ್ಕೊಳೋದು ಹೇಗೆ?

ಮಕ್ಕಳು ದಿನದಿಂದ ದಿನಕ್ಕೆ ಬೆಳೆದು ದೊಡ್ಡವರಾಗ್ತಾರೆ. ಆದರೆ ಅವರ ಬೆಳವಣಿಗೆ ಕೇವಲ ಎತ್ತರ–ತೂಕಕ್ಕೆ ಮಾತ್ರ ಸೀಮಿತವಲ್ಲ. ಶಾರೀರಿಕ, ಮಾನಸಿಕ ಹಾಗೂ ಭಾವನಾತ್ಮಕ ಬೆಳವಣಿಗೆಯೂ ಸಮತೋಲನದಲ್ಲಿರಬೇಕು. ಮಕ್ಕಳ ಬೆಳವಣಿಗೆ ಸರಿಯಾಗಿದೆಯೇ ಅನ್ನೋದನ್ನ ಪೋಷಕರು ಕೆಲ ಸರಳ ಲಕ್ಷಣಗಳಿಂದಲೇ ಅರ್ಥಮಾಡಿಕೊಳ್ಳಬಹುದು. ತುಂಬಾನೇ ಸಲಭ.

ಮಗುವಿನ ವಯಸ್ಸಿಗೆ ತಕ್ಕಂತೆ ಎತ್ತರ ಹಾಗೂ ತೂಕ ಹೆಚ್ಚಾಗ್ತಿದೆಯೇ ಅನ್ನೋದನ್ನು ನಿಯಮಿತವಾಗಿ ನೋಡುತ್ತಿರಬೇಕು. ಡಾಕ್ಟರ್ ನೀಡುವ ಗ್ರೋತ್ ಚಾರ್ಟ್ ಇದಕ್ಕೆ ಸಹಾಯಕ.

ಮಗು ಆರೋಗ್ಯಕರ ಊಟ ತಿನ್ನುತ್ತಿದೆಯೇ, ಆಹಾರದಲ್ಲಿ ಪ್ರೊಟೀನ್ , ಫ್ಯಾಟ್, ಫೈಬರ್ ಎಲ್ಲವೂ ಇದೆಯೇ ಅನ್ನೋದು ನೋಡಿಕೊಂಡು ಕೊಟ್ಟರೆ ಬೆಳವಣಿಗೆ ಉತ್ತಮವಾಗಿ ಆಗೋದು ಖಂಡಿತ.

ಆಟ, ಓಟ, ಕಲಿಕೆ ಚಟುವಟಿಕೆಯಲ್ಲಿ ಆಸಕ್ತಿ ತೋರಿಸಿದರೆ ಅದು ಉತ್ತಮ ಬೆಳವಣಿಗೆಯ ಸೂಚನೆ.

ವಯಸ್ಸಿಗೆ ತಕ್ಕಂತೆ ಮಾತಾಡುವುದು, ಪ್ರಶ್ನೆ ಕೇಳುವುದು ಮಾನಸಿಕ ಬೆಳವಣಿಗೆಯ ಸಂಕೇತ.

ಇದನ್ನೂ ಓದಿ: Kitchen tips | ಹಸಿ ಮೆಣಸಿನಕಾಯಿ ಈ ರೀತಿ ಸಂಗ್ರಹಿಸಿಟ್ಟರೆ ತಿಂಗಳುಗಳ ಕಾಲ ಫ್ರೆಶ್ ಆಗಿರುತ್ತೆ!

ಸಂತೋಷ, ದುಃಖ, ಅಳು, ಭಯಗಳನ್ನು ವ್ಯಕ್ತಪಡಿಸುವ ಸಾಮರ್ಥ್ಯವೂ ಆರೋಗ್ಯಕರ ಬೆಳವಣಿಗೆಯ ಭಾಗ.

ನೆನಪಿಟ್ಟುಕೊಳ್ಳಿ ಪೋಷಕರ ಗಮನ ಮತ್ತು ಸಮಯವೇ ಮಕ್ಕಳ ಸಮಗ್ರ ಬೆಳವಣಿಗೆಗೆ ಅತ್ಯಂತ ಮುಖ್ಯ.

error: Content is protected !!