ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಗು ಆರೋಗ್ಯದಿಂದ ಬೆಳೆಯಬೇಕು ಎಂಬ ಆಸೆ ಇದ್ದೆ ಇರುತ್ತದೆ. ಶಿಶುಗಳು ತಮ್ಮದೇ ಆದ ವೇಗದಲ್ಲಿ ಬೆಳೆಯುತ್ತಿದ್ದರೂ, ಕೆಲವು ನೈಸರ್ಗಿಕ ಲಕ್ಷಣಗಳು ಅವರ ಬೆಳವಣಿಗೆ ಸರಿಯಾದ ದಾರಿಗೆ ಸಾಗುತ್ತಿದೆ ಎಂಬುದನ್ನು ತಿಳಿಸುತ್ತವೆ. ವೈದ್ಯಕೀಯ ತಜ್ಞರ ಪ್ರಕಾರ, ತೂಕದ ಸ್ಥಿರವಾದ ಏರಿಕೆ, ಉತ್ತಮ ನಿದ್ರೆ ಮತ್ತು ಸಾಮಾನ್ಯ ಪ್ರತಿಕ್ರಿಯೆಗಳು ಮಗುವಿನ ಆರೋಗ್ಯಕರ ಬೆಳವಣಿಗೆಯ ಪ್ರಮುಖ ಸೂಚಕಗಳಾಗಿವೆ.

ನವಜಾತ ಶಿಶುಗಳು ಸಾಮಾನ್ಯವಾಗಿ ದಿನಕ್ಕೆ 14 ರಿಂದ 17 ಗಂಟೆಗಳವರೆಗೆ ನಿದ್ರೆ ಮಾಡುತ್ತವೆ. ಇದು ಮೆದುಳಿನ ಪಕ್ವತೆಗೆ ಹಾಗೂ ದೇಹದ ದುರಸ್ತಿ ಕಾರ್ಯಕ್ಕೆ ಸಹಕಾರಿ. ಶಿಶುಗಳು ಆಗಾಗ್ಗೆ ಸೀನುವುದು, ಬಿಕ್ಕಳಿಸುವುದು, ಅಥವಾ ಮೂತ್ರ ವಿಸರ್ಜನೆಯ ವೇಳೆ ಅಳುವುದು ಸಹ ನೈಸರ್ಗಿಕ ಪ್ರತಿಕ್ರಿಯೆಗಳಾಗಿದ್ದು, ಯಾವುದೇ ಆತಂಕಕ್ಕೀಡಾಗುವಂತಹದ್ದಲ್ಲ.

ಇದೇ ರೀತಿ, ಪ್ರತಿ ಒಂದರಿಂದ ಎರಡು ಗಂಟೆಗಳಿಗೊಮ್ಮೆ ಆಹಾರ ಪಡೆಯುವ ಶಿಶುಗಳು ಸಾಕಷ್ಟು ಪೋಷಕಾಂಶಗಳನ್ನು ಪಡೆಯುತ್ತಿರುವುದನ್ನು ಸೂಚಿಸುತ್ತದೆ. ನಿಯಮಿತ ತೂಕದ ಏರಿಕೆ, ನಿದ್ರೆಯ ಸಮಯದಲ್ಲಿ ನಗುವುದು, ಮತ್ತು ಮುಖದ ಮೇಲೆ ಕಾಣಿಸಿಕೊಳ್ಳುವ ಶಿಶು ಮೊಡವೆಗಳು ಸಹ ಸಾಮಾನ್ಯ ಬೆಳವಣಿಗೆಯ ಭಾಗಗಳಾಗಿವೆ.

ಈ ನೈಸರ್ಗಿಕ ಲಕ್ಷಣಗಳು ಪೋಷಕರಿಗೆ ಆತಂಕಕ್ಕಿಂತ ಭರವಸೆಯನ್ನು ನೀಡುತ್ತವೆ. ಶಿಶುವಿನ ಬೆಳವಣಿಗೆಯ ಈ ಸೂಚನೆಗಳನ್ನು ಗಮನಿಸಿ, ಪೋಷಕರು ತಮ್ಮ ಮಗುವಿನ ಆರೋಗ್ಯದ ಬಗ್ಗೆ ಆತ್ಮವಿಶ್ವಾಸದಿಂದ ಇರಬಹುದು. ತಜ್ಞರು ಹೇಳುವಂತೆ, ಯಾವುದೇ ಅಸಹಜ ಬದಲಾವಣೆ ಕಂಡುಬಂದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)