January19, 2026
Monday, January 19, 2026
spot_img

Child Care | ಪುಟ್ಟ ಮಕ್ಕಳ ಕಣ್ಣಿಗೆ ಕಾಜಲ್ ಹಚ್ಚುವ ಮುನ್ನ ಈ ವಿಷಯ ತಿಳ್ಕೊಳಿ!

ಹೆಣ್ಣು ಮಕ್ಕಳು ಮಾತ್ರವಲ್ಲದೆ ಪುಟ್ಟ ಮಕ್ಕಳಿಗೂ ಪೋಷಕರು ಕಣ್ಣು ಸುಂದರವಾಗಿರಲಿ, ಜೊತೆಗೆ ಕೆಟ್ಟ ದೃಷ್ಟಿ ಬೀಳದಿರಲಿ ಎಂದು ಕಾಜಲ್ ಹಚ್ಚುವುದು ಸಾಮಾನ್ಯ. ಅನೇಕ ಮನೆಗಳಲ್ಲಿ ಹಳೆಯ ಪದ್ಧತಿಯಂತೆ ನೈಸರ್ಗಿಕ ಕಾಡಿಗೆ ತಯಾರು ಮಾಡಿ ಬಳಸುತ್ತಾರೆ. ಆದರೆ ಇಂದಿನ ಕಾಲದಲ್ಲಿ ಮಾರುಕಟ್ಟೆಯಲ್ಲಿ ದೊರೆಯುವ ಹೆಚ್ಚಿನ ಕಾಜಲ್ ಉತ್ಪನ್ನಗಳು ರಾಸಾಯನಿಕಗಳಿಂದ ಕೂಡಿರುವುದರಿಂದ ಮಕ್ಕಳ ಸೂಕ್ಷ್ಮ ಕಣ್ಣುಗಳಿಗೆ ಅದು ಅಪಾಯವನ್ನುಂಟುಮಾಡಬಹುದು.

ಮಕ್ಕಳ ಕಣ್ಣುಗಳು ಅತ್ಯಂತ ನಾಜೂಕಾಗಿದ್ದು, ನೀವು ಮಾಡುವ ಚಿಕ್ಕ ತಪ್ಪು ಕೂಡ ದೊಡ್ಡ ಸಮಸ್ಯೆಗೆ ಕಾರಣವಾಗಬಹುದು. ಪೋಷಕರು ಭಾವಿಸುವಂತೆ ಕಾಜಲ್ ಕೇವಲ ಅಲಂಕಾರ ಮಾತ್ರವಲ್ಲದೆ ರಕ್ಷಣೆ ನೀಡುತ್ತದೆ ಎಂಬುದು ತಪ್ಪು ಕಲ್ಪನೆ. ನೈಸರ್ಗಿಕ ವಿಧಾನದಲ್ಲಿ ತಯಾರಿಸಿದ ಕಾಜಲ್ ಕಡಿಮೆ ಅಪಾಯಕಾರಿ ಆದರೆ ಮಾರುಕಟ್ಟೆಯ ಉತ್ಪನ್ನಗಳಲ್ಲಿ ಇರುವ ರಾಸಾಯನಿಕಗಳು ಮಕ್ಕಳ ಕಣ್ಣಿಗೆ ಹಾನಿ ತರುವ ಸಾಧ್ಯತೆ ಹೆಚ್ಚು. ಆದ್ದರಿಂದ ಕಾಜಲ್ ಬಳಸುವ ಮೊದಲು ಅದರ ಗುಣಮಟ್ಟದ ಬಗ್ಗೆ ತಿಳಿದುಕೊಳ್ಳುವುದು ಅತ್ಯವಶ್ಯಕ.

ರಾಸಾಯನಿಕಗಳ ಅಪಾಯ – ಮಾರುಕಟ್ಟೆಯ ಕಾಜಲ್‌ಗಳಲ್ಲಿ ಇರುವ ರಾಸಾಯನಿಕಗಳು ಕಣ್ಣಿಗೆ ಸೋಂಕು ತರುವ ಸಾಧ್ಯತೆ ಇದೆ.

ಕಿರಿಕಿರಿ ಮತ್ತು ಕೆಂಪಾಗುವುದು – ಕಾಜಲ್ ಕಣ್ಣು ಒಳಗೆ ಸೇರಿದರೆ ಉರಿ, ಕೆಂಪು ಮತ್ತು ನೋವು ಉಂಟಾಗಬಹುದು.

ಬ್ಯಾಕ್ಟೀರಿಯಲ್ ಇನ್ಫೆಕ್ಷನ್ – ಕಾಜಲ್‌ನಲ್ಲಿ ಇರುವ ಕಣಗಳು ಕಣ್ಣಿನಲ್ಲಿ ಸೇರಿ ಬ್ಯಾಕ್ಟೀರಿಯಾದ ಸೋಂಕು ತರುತ್ತವೆ. ಇದನ್ನು ಟ್ರಾಕೋಮಾ ಎಂದು ಕರೆಯಲಾಗುತ್ತದೆ.

ಟ್ರಾಕೋಮಾದ ಪರಿಣಾಮ – ಇದು ಸಾಂಕ್ರಾಮಿಕವಾಗಿದ್ದು, ಕಣ್ಣು, ಮೂಗು ಅಥವಾ ಗಂಟಲಿನ ಸ್ರವಗಳ ಮೂಲಕ ಹರಡುತ್ತದೆ. ತುರಿಕೆ, ಊತ, ಕಣ್ಣಿಂದ ಕೀವು ಬರುವುದು ಮುಂತಾದ ಲಕ್ಷಣಗಳು ಕಾಣಬಹುದು. ಗಂಭೀರವಾಗಿ ಮುಂದುವರಿದರೆ ಕುರುಡುತನಕ್ಕೂ ಕಾರಣವಾಗಬಹುದು.

ಮಕ್ಕಳ ಕಣ್ಣು ಹೆಚ್ಚು ಸೂಕ್ಷ್ಮ – ದೊಡ್ಡವರಿಗಿಂತ ಪುಟ್ಟ ಮಕ್ಕಳ ಕಣ್ಣುಗಳು ಬೇಗನೆ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ.

Must Read

error: Content is protected !!