ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೈಪುರದಿಂದ ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಒಂದು ವರ್ಷದ ಮಗುವಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಇಂದೋರ್ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಯಿತು. ಆದ್ರೆ ಮಗು ಸಾವನ್ನಪ್ಪಿದಂತಹ ಘಟನೆ ನಡೆದಿದೆ.
ವಿಮಾನ ಆಗಸದಲ್ಲಿ ಹಾರಾಡುತ್ತಿದ್ದಾಗ ಒಂದು ವರ್ಷದ ಮಗು ಮೊಹಮ್ಮದ್ ಅಬ್ರಾರ್‌ಗೆ ಉಸಿರಾಟದ ಸಮಸ್ಯೆಯಾಗಿದೆ. ವಿಮಾನದಲ್ಲಿದ್ದ ವೈದ್ಯಕೀಯ ಸಿಬ್ಬಂದಿ ಕೂಡಲೇ ಆತನ ರಕ್ಷಣೆಗೆ ಆಗಮಿಸಿದ್ದರು. ಆದರೂ ಮಗುವಿನ ಸ್ಥಿತಿ ವಿಷಮಿಸುತ್ತಿದ್ದ ಹಿನ್ನೆಲೆ ಕೂಡಲೇ ವಿಮಾನವನ್ನು ಇಂದೋರ್ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಯ್ತು. ಇಂದೋರ್ ವಿಮಾನ ನಿಲ್ದಾಣಕ್ಕೆ ಮೊದಲೇ ತಿಳಿಸಿದ್ದರಿಂದ ವೈದ್ಯರನ್ನು ವಿಮಾನ ನಿಲ್ದಾಣದಲ್ಲಿ ಮಗುವಿನ ತಪಾಸಣೆಗೆ ಸಿದ್ಧವಾಗಿ ನಿಂತಿದ್ದರು. ಆದರೂ ಮಗು ಬದುಕುಳಿಯಲಿಲ್ಲ. ಅಲ್ಲಿಗೆ ತಲುಪುವ ಮೊದಲೇ ಮಗು ಸಾವನ್ನಪ್ಪಿದೆ ಎಂದು ವೈದ್ಯರು ಘೋಷಿಸಿದ್ದಾರೆ.
ಜನವರಿ 6ರಂದು IX 1240 ಸಂಖ್ಯೆಯ ಜೈಪುರದಿಂದ ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಈ ಅನಾಹುತ ನಡೆದಿದೆ. ವಿಮಾನದ ಪೈಲಟ್ ವೈದ್ಯಕೀಯ ಸಹಾಯಕ್ಕಾಗಿ ಸಮೀಪವಿದ್ದ ಏರ್‌ಪೋರ್ಟ್‌ನತ್ತ ವಿಮಾನ ತಿರುಗಿಸಿದ್ದಾರೆ ಆದರೆ ಯಾವ ಪ್ರಯತ್ನಗಳು ಫಲ ಕೊಡದೆ ಮಗು ಸಾವನ್ನಪ್ಪಿದೆ.

