Wednesday, October 22, 2025

ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳು ಸಾವು: ಡಾ.ಪ್ರವೀಣ್ ಸೋನಿ ಜಾಮೀನು ನಿರಾಕರಿಸಿದ ಕೋರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರದೇಶ ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಮಕ್ಕಳ ತಜ್ಞ ಡಾ.ಪ್ರವೀಣ್ ಸೋನಿ ಜಾಮೀನು ಅರ್ಜಿಯನ್ನು ಮಧ್ಯಪ್ರದೇಶ ಜಿಲ್ಲಾ ನ್ಯಾಯಾಲಯ ನಿರಾಕರಿಸಿದೆ.

ಜಿಲ್ಲಾ ನ್ಯಾಯಾಲಯ ಮಂಗಳವಾರ ಡಾ.ಪ್ರವೀಣ್ ಸೋನಿ ಜಾಮೀನು ಅರ್ಜಿಯ ವಿಚಾರಣೆ ನಡೆಸಿತು. ತನಿಖೆಯ ಸಂದರ್ಭಲ್ ಔಷಧಿ ಶಿಫಾರಸು ಮಾಡಿದ್ದಕ್ಕಾಗಿ 10% ಕಮಿಷನ್ ಪಡೆದಿರುವುದಾಗಿ ಡಾ.ಪ್ರವೀಣ್ ಸೋನಿ ಒಪ್ಪಿಕೊಂಡಿದ್ದಾರೆ. ಜೊತೆಗೆ ಸಿರಪ್ ಸೇವಿಸಿದ ಮಕ್ಕಳು ಮೂತ್ರಪಿಂಡ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದರೂ ಕೂಡ ಸಿರಪ್ ಶಿಫಾರಸು ಮಾಡುವುದನ್ನು ನಿಲ್ಲಿಸಿರಲಿಲ್ಲ ಎಂದು ತಿಳಿದುಬಂದಿದೆ.

ಈ ಸಿರಪ್‌ನ್ನು ಚಿಕ್ಕ ಮಕ್ಕಳಿಗೆ ನೀಡಬಾರದು ಎಂದು ತಿಳಿದಿದ್ದರೂ ಕೂಡ ಡಾ.ಸೋನಿಯವರು ಆ.24ರಿಂದ ಅ.4ರವರೆಗೆ ಹಲವು ಮಕ್ಕಳಿಗೆ ಸಿರಪ್ ತೆಗೆದುಕೊಳ್ಳುವಂತೆ ಶಿಫಾರಸು ಮಾಡಿದ್ದಾರೆ ಎಂದು ತನಿಖೆ ವೇಳೆ ಬಯಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಸಿರಪ್ ಶಿಫಾರಸು ಮಾಡಿದ ಬಳಿಕ ಆ.29ರಂದು ಮೊದಲ ಮಗು ಸಾವನ್ನಪ್ಪಿತು. ಅದಾದ ನಂತರ ಸೆ.5ರಂದು 3 ವರ್ಷದ ಬಾಲಕಿ ಮೂತ್ರಪಿಂಡ ವೈಫಲ್ಯದೊಂದಿಗೆ ಸಾವನ್ನಪ್ಪಿದ್ದಳು ಎಂದು ತಿಳಿಸಿದ್ದಾರೆ.

error: Content is protected !!