January19, 2026
Monday, January 19, 2026
spot_img

ಮಕ್ಕಳಿಗೆ ನಮ್ಮ ಭಾಷೆ ಬರಲೇಬೇಕು! ಖಾಸಗಿ ಶಾಲೆಗಳಲ್ಲಿ ಕನ್ನಡ ಕಲಿಸದಿದ್ರೆ ಕ್ರಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದ ಎಲ್ಲಾ ಮಾದರಿ ಬೋರ್ಡ್‌ಗಳು ಕಡ್ಡಾಯವಾಗಿ ಕನ್ನಡ ಭಾಷೆ ಕಲಿಸಬೇಕು. ಇಲ್ಲದೆ ಹೋದ್ರೆ ಅಂತಹ ಶಾಲೆಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಎಚ್ಚರಿಕೆ ನೀಡಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ರವಿಕುಮಾರ್ ಪ್ರಶ್ನೆ ಕೇಳಿದರು. ರಾಜ್ಯದಲ್ಲಿ ICSE, CBSE, IB, IGCS ಸೇರಿ ಅಂತರಾಷ್ಟ್ರೀಯ ಶಾಲೆಗಳಲ್ಲಿ ಕಡ್ಡಾಯ ಭಾಷೆ ಕಲಿಕೆ ನಿಯಮ ಜಾರಿ ಮಾಡಿಲ್ಲ. ನಿಯಮಗಳು ಅನೇಕ ಶಾಲೆಗಳು ಜಾರಿ ಮಾಡಿಲ್ಲ. ಸರ್ಕಾರದ ನಿಯಮ ಖಾಸಗಿ ಶಾಲೆಗಳು ಉಲ್ಲಂಘನೆ ಮಾಡಲಾಗಿದೆ. ಶಿಕ್ಷಣ ಇಲಾಖೆ ಕೇವಲ ನೊಟೀಸ್ ಕೊಡಲಾಗಿದೆ. ಇಂತಹ ಶಾಲೆಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಅಂತ ಆಗ್ರಹ ಮಾಡಿದರು. RTE ಅಡಿ ಎರಡು ವರ್ಷಗಳಲ್ಲಿ ದಾಖಲಾತಿ ಕಡಿಮೆ ಆಗಿದೆ. ಖಾಸಗಿ ಶಾಲೆಗಳಲ್ಲಿ 25% ಸೀಟು ಕೊಡಬೇಕು. ಈ ಶಾಲೆಗೆ ಸರ್ಕಾರವೇ ಹಣ ಕೊಡಲಿದೆ. ಕಳೆದ 2 ವರ್ಷಗಳಲ್ಲಿ ದಾಖಲಾತಿ ಯಾಕೆ ಕಡಿಮೆ ಆಯ್ತು ಅಂತ ಪ್ರಶ್ನೆ ಮಾಡಿದರು.

ಇದಕ್ಕೆ ಸಚಿವ ಮಧು ಬಂಗಾರಪ್ಪ ಉತ್ತರ ನೀಡಿ, ಯಾವುದೇ ಶಾಲೆ ಆದರು ಕನ್ನಡ ಕಲಿಸಬೇಕು ಅಂತ ಮುಚ್ಚಳಿಕೆ ಬರೆಸಿಕೊಳ್ಳುತ್ತೇವೆ. ಕನ್ನಡ ಭಾಷೆ ಕಡ್ಡಾಯವಾಗಿ ಕಲಿಸಬೇಕು. ಕನ್ನಡ ಕಲಿಸದೇ ಹೋದ್ರೆ ಅಂತಹ ಶಾಲೆ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಸೋಫಿಯಾ ಶಾಲೆಯ ಮೇಲೆ ಆರೋಪ ಬಂದಾಗ ತನಿಖೆ ಮಾಡಿಸಿದ್ದೆವು. ನಮ್ಮ ಗಮನಕ್ಕೆ ಇಂತಹ ಲೋಪ ಕಂಡು ಬಂದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಯಾವುದೇ ಶಾಲೆ ಮೇಲೆ ದೂರು ಬಂದರೆ ತನಿಖೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ. ಕನ್ನಡ ಕಲಿಕೆ ಆಗುತ್ತಿದೆಯಾ ಇಲ್ಲವಾ ಎಂದು ಮತ್ತೆ ಪರಿಶೀಲನೆ ಮಾಡುತ್ತೇವೆ ಎಂದು ತಿಳಿಸಿದರು.

Must Read

error: Content is protected !!