March 12, 2026
Thursday, March 12, 2026
spot_img

ಎಐ ಇಂಪ್ಯಾಕ್ಟ್ ಸಮ್ಮಿಟ್ ನಲ್ಲಿ ಚೀನಾ ರೋಬೋಡಾಗ್ ಪ್ರದರ್ಶನ: ಕ್ಷಮೆಯಾಚಿಸಿದ ಗ್ಯಾಲ್ಗೋಟಿಯಾಸ್ ವಿವಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಐ ಇಂಪ್ಯಾಕ್ಟ್ ಸಮ್ಮಿಟ್ ನಲ್ಲಿ ಚೀನಾ ತಯಾರಿಸಿದ ರೋಬೋಡಾಗ್ ಪ್ರದರ್ಶಿಸಿ ವಿವಾದ ಹುಟ್ಟುಹಾಕಿದ್ದ ಗ್ಯಾಲ್ಗೋಟಿಯಾಸ್ ವಿಶ್ವವಿದ್ಯಾಲಯ ಬುಧವಾರ ಕ್ಷಮೆಯಾಚಿಸಿದೆ.

ವಿಶ್ವವಿದ್ಯಾನಿಲಯದ ಸಂವಹನ ವಿಭಾಗದ ಪ್ರಾಧ್ಯಾಪಕಿ ನೇಹಾ ಸಿಂಗ್ ರೋಬೋಡಾಗ್ ತೋರಿಸಿ, ಇದನ್ನು ಗ್ಯಾಲ್ಗೋಟಿಯಾಸ್ ವಿಶ್ವವಿದ್ಯಾಲಯದ ಸೆಂಟರ್ ಆಫ್ ಎಕ್ಸಲೆನ್ಸ್ ಅಭಿವೃದ್ಧಿಪಡಿಸಿದೆ ಎಂದು ಹೇಳಿದ ನಂತರ ವಿವಾದ ಭುಗಿಲೆದ್ದಿತ್ತು.

ಇತ್ತ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಮಾಧ್ಯಮ ಬಳಕೆದಾರರು, ಇದು ಚೀನಾದ ಯುನಿಟ್ರೀ ರೊಬೊಟಿಕ್ಸ್ ತಯಾರಿಸಿದ ಯುನಿಟ್ರೀ Go2 ಆಗಿದ್ದು ಎಂದು ಹೇಳಿದ್ದರು. ಇದು ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ಗ್ಯಾಲ್ಗೋಟಿಯಾಸ್ ವಿಶ್ವವಿದ್ಯಾಲಯವನ್ನು ತನ್ನ ಎಕ್ಸ್‌ಪೋ ಸ್ಟಾಲ್‌ನಿಂದ ಖಾಲಿ ಮಾಡುವಂತೆ ಕೇಳಿಕೊಳ್ಳಲಾಗಿತ್ತು.

ಇದೀಗ ಈ ಸಂಬಂಧ ಇಂಡಿಯಾ ಎಐ ಇಂಪ್ಯಾಕ್ಟ್ ಸಮ್ಮಿಟ್ ನಲ್ಲಿ ಕ್ಷಮೆಯಾಚಿಸಲು ಬಯಸುತ್ತೇವೆ. ಪೆವಿಲಿಯನ್ ನಿರ್ವಹಿಸುತ್ತಿದ್ದ ನಮ್ಮ ಪ್ರತಿನಿಧಿಯೊಬ್ಬರು ತಪ್ಪು ಮಾಹಿತಿ ನೀಡಿದ್ದಾರೆ ಎಂದು ವಿಶ್ವವಿದ್ಯಾಲಯದ ವಕ್ತಾರರು ಹೇಳಿದ್ದಾರೆ.

ಆಕೆ ರೋಬೋಡಾಗ್ ನ ತಾಂತ್ರಿಕ ಮೂಲದ ಬಗ್ಗೆ ತಿಳಿದಿರಲಿಲ್ಲ ಮತ್ತು ಉತ್ಸಾಹದಿಂದ ಸುದ್ದಿಗಾರರೊಂದಿಗೆ ಮಾತನಾಡಲು ಅಧಿಕಾರವಿಲ್ಲದಿದ್ದರೂ ವಾಸ್ತವಿಕವಾಗಿ ತಪ್ಪಾದ ಮಾಹಿತಿಯನ್ನು ನೀಡಿದ್ದಾರೆ. ನಾವೀನ್ಯತೆಯನ್ನು ತಪ್ಪಾಗಿ ಪ್ರತಿನಿಧಿಸುವ ಯಾವುದೇ ಸಾಂಸ್ಥಿಕ ಉದ್ದೇಶವಿಲ್ಲ ಎಂದು ಅವರು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !