ಇರಾಕ್ ನಲ್ಲಿ ಕ್ಲೋರಿನ್ ಗ್ಯಾಸ್ ಲೀಕ್: 600ಕ್ಕೂ ಹೆಚ್ಚು ಯಾತ್ರಿಕರು ಅಸ್ವಸ್ಥ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇರಾಕ್ ನಲ್ಲಿ ಸುನ್ನಿ ಸಮುದಾಯಕ್ಕೆ ಸೇರಿದ ನಜಾಕ್ ಹಾಗೂ ಕರ್ಬಾಲಾ ಎಂಬ ಎರಡು ಪುಣ್ಯಕ್ಷೇತ್ರಗಳ ನಡುವಿನ ನೀರಿನ ಸಂಸ್ಕರಣಾ ಘಟಕದ ಬಳಿ ನೆರೆದಿದ್ದ ಯಾತ್ರಿಕರಲ್ಲಿ ಸುಮಾರು 600ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡ ಘಟನೆ ನಡೆದಿದೆ.

ನಜಾಕ್ ಹಾಗೂ ಕರ್ಬಾಲಾ ಎಂಬ ನಗರಗಳಲ್ಲಿ ಧಾರ್ಮಿಕ ಕಾರ್ಯಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿಗೆ ಇರಾಕ್ ನ ಮೂಲೆಮೂಲೆಗಳಿಂದ ಹಾಗೂ ವಿಶ್ವದ ನಾನಾ ಭಾಗಗಳಿಂದ ಆಗಮಿಸಿದ್ದ ಸುನ್ನಿ ಸಮುದಾಯದ ಅನೇಕ ಜನರು, ಇಲ್ಲಿ ನಲೆಸಿದ್ದರು.

ಆಗಮಿಸಿದವರು ನಜಾಕ್ ಬಳಿಯ ಕಾಲು ದಾರಿಯಲ್ಲಿ ಸಾಗುತ್ತಿದ್ದರು. ಆ ಮಾರ್ಗದ ಪಕ್ಕವೇ ನೀರಿನ ಶುದ್ಧೀಕರಣ ಘಟಕವಿದೆ. ಆ ಘಟಕದಲ್ಲಿ ಬಳಕೆಯಾಗುತ್ತಿದ್ದ ಕ್ಲೋರಿನ್ ಗ್ಯಾಸ್ ಲೀಕ್ ಆಗಿದ್ದು ಅದು ಸುತ್ತಲಿನ ವಾತಾವರಣದಲ್ಲಿ ಹರಡಿದೆ.

ಯಾತ್ರಾರ್ತಿಗಳು ಆ ಘಟಕದ ಪಕ್ಕದಿಂದ ಸಾಗುವಾಗ, ಗಾಳಿಯಲ್ಲಿ ಹರಡಿರುವ ಕ್ಲೋರಿನ್ ಗ್ಯಾಸ್ ಉಸಿರಾಡಿದ್ದಾರೆ. ನಿಧಾನವಾಗಿ ಅನೇಕರಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಅದರಿಂದಾಗಿ ಅನೇಕರು ಸ್ಥಳದಲ್ಲೇ ಅಸ್ವಸ್ಥರಾಗಿದ್ದಾರೆ. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿರುವ ವೈದ್ಯರು ಅವರನ್ನು ಆಸ್ಪತ್ರೆಯಲ್ಲೇ ಉಳಿಸಿಕೊಂಡಿದ್ದಾರೆ.

ಘಟನೆ ತಿಳಿದ ಕೂಡಲೇ ಸ್ಥಳೀಯ ಸರ್ಕಾರ, ನೀರು ಶುದ್ಧೀಕರಣ ಘಟಕದ ಸುತ್ತಲೂ ಜನರಿಗೆ ನಿರ್ಬಂಧ ವಿಧಿಸಿದೆ. ಕೂಡಲೇ ಕ್ಲೋರಿನ್ ಗ್ಯಾಸ್ ಸೋರಿಕೆ ತಡೆಯಲು ಕ್ರಮ ಕೈಗೊಂಡಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!