Friday, December 12, 2025

CAKE |🎄ಕ್ರಿಸ್‌ಮಸ್‌ ಕೇಕ್‌ಗಿದೆ ಸಪರೇಟ್‌ ಫ್ಯಾನ್‌ಬೇಸ್‌! ಹೇಗೆ ಮಾಡೋದು ನೋಡಿ..

ಸಾಮಾಗ್ರಿಗಳು

ಒಣದ್ರಾಕ್ಷಿ, ಖರ್ಜೂರ, ಅಂಜೂರ ಹೇಝಲ್‌ನಟ್, ಬಾದಾಮಿ ಇತ್ಯಾದಿ, ಮದ್ಯ, ಕಪ್ಪು ಚಹಾ, ಕಿತ್ತಳೆ ರಸ, ಅಥವಾ ಸೇಬಿನ ರಸ. ಬೆಣ್ಣೆ, ಸಕ್ಕರೆ, ಮೊಟ್ಟೆ, ವೆನಿಲ್ಲಾ, ಮಸಾಲೆಗಳು, ಮೈದಾ

ಮಾಡುವ ವಿಧಾನ:

ಹಣ್ಣುಗಳನ್ನು ನೆನೆಸುವುದು: ಒಂದು ಪಾತ್ರೆಯಲ್ಲಿ ಬೆಣ್ಣೆ, ಸಕ್ಕರೆ, ಹಣ್ಣುಗಳು, ಮಸಾಲೆಗಳು, ಕಿತ್ತಳೆ ರಸ/ಬ್ರಾಂಡಿ ಹಾಕಿ ನಿಧಾನವಾಗಿ ಕುದಿಸಿ (10 ನಿಮಿಷ) ಮತ್ತು ತಣ್ಣಗಾಗಲು ಬಿಡಿ.
ಕ್ರೀಮ್ ತಯಾರಿಕೆ: ಇನ್ನೊಂದು ಬಟ್ಟಲಿನಲ್ಲಿ ಬೆಣ್ಣೆ ಮತ್ತು ಸಕ್ಕರೆಯನ್ನು ಕೆನೆಯಾಗುವವರೆಗೆ ವೀಟ್ ಮಾಡಿ. ಮೊಟ್ಟೆಗಳನ್ನು ಒಂದೊಂದಾಗಿ ಸೇರಿಸಿ, ನಂತರ ವೆನಿಲ್ಲಾ ಎಸೆನ್ಸ್ ಮತ್ತು ಹಣ್ಣಿನ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಹಿಟ್ಟು ಸೇರಿಸುವುದು: ಈ ಮಿಶ್ರಣಕ್ಕೆ ಹಿಟ್ಟು ಮತ್ತು ನೆನೆಸಿದ ಹಣ್ಣುಗಳನ್ನು ಸೇರಿಸಿ ನಿಧಾನವಾಗಿ ಮಿಶ್ರ ಮಾಡಿ.
ಬೇಕಿಂಗ್: ಮಿಶ್ರಣವನ್ನು ಬೆಣ್ಣೆ ಸವರಿದ ಕೇಕ್ ಟಿನ್‌ಗೆ ಹಾಕಿ, ಮಧ್ಯದಲ್ಲಿ ಒಂದು ಸಣ್ಣ ಒಳಹೊರಗು ಮಾಡಿ.
ಓವೆನ್: ಕಡಿಮೆ ಉರಿಯಲ್ಲಿ (ಸುಮಾರು 120°C – 140°C) 2-3 ಗಂಟೆಗಳ ಕಾಲ ಬೇಯಿಸಿ, ಕೇಕ್ ಮಧ್ಯಭಾಗ ಬೇಯಿದಿದೆಯೇ ಎಂದು ಖಚಿತಪಡಿಸಿಕೊಳ್ಳಿ.
ಫೀಡಿಂಗ್ (ಐಚ್ಛಿಕ): ಕೇಕ್ ತಣ್ಣಗಾದ ನಂತರ, ಮರದ ಕಡ್ಡಿಗಳಿಂದ ರಂಧ್ರ ಮಾಡಿ, ಸ್ವಲ್ಪ ಬ್ರಾಂಡಿ ಅಥವಾ ರಸವನ್ನು ಹಾಕಿ ಪ್ರತಿ 10 ದಿನಗಳಿಗೊಮ್ಮೆ 4-5 ವಾರಗಳವರೆಗೆ ಫೀಡ್ ಮಾಡಿ.
ಅಲಂಕಾರ: ಕೇಕ್ ಸಂಪೂರ್ಣವಾಗಿ ತಣ್ಣಗಾದ ನಂತರ ಮಾರ್ಜಿಪಾನ್ ಮತ್ತು ಐಸಿಂಗ್‌ನಿಂದ ಅಲಂಕರಿಸಿ. 

    error: Content is protected !!