Sunday, September 7, 2025

CINE | ಧನುಷ್‌ ಜೊತೆ ಡೇಟಿಂಗ್‌ ವಿಚಾರ: ಕಡೆಗೂ ಮೌನ ಮುರಿದ ನಟಿ ಮೃಣಾಲ್‌ ಠಾಕೂರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ನಟಿ ಮೃಣಾಲ್‌ ಠಾಕೂರ್‌ ಹಾಗೂ ನಟ ಧನುಷ್‌ ಡೇಟಿಂಗ್‌ನಲ್ಲಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ವೈರಲ್‌ ಆಗಿತ್ತು. ಸನ್‌ ಆಫ್‌ ಸರ್ದಾರ್‌ ಸಿನಿಮಾ ಈವೆಂಟ್‌ ಒಂದರಲ್ಲಿ ಧನುಷ್‌ ಮೃಣಾಲ್‌ ಒಟ್ಟಿಗೇ ಕಾಣಿಸಿಕೊಂಡಿದ್ದರು. ಇದು ರೂಮರ್ಸ್‌ ಹುಟ್ಟೋದಕ್ಕೆ ಕಾರಣವಾಗಿತ್ತು.

ಇದೀಗ ಮೃಣಾಲ್‌ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಯಾರೇ ಆಗಲಿ ಸಲುಗೆಯಿಂದ ಮಾತನಾಡಿದರೆ ಡೇಟಿಂಗ್‌ ಎನ್ನುವ ವಿಚಾರ ಮುನ್ನಲೆಗೆ ಬರುತ್ತದೆ. ನಾನು ಧನುಷ್‌ ಸ್ನೇಹಿತರಷ್ಟೆ. ಯಾವ ಡೇಟಿಂಗ್‌ ಇಲ್ಲ. ಧನುಷ್‌ ಅವರನ್ನು ನಾನು ಕರೆದಿಲ್ಲ, ಈವೆಂಟ್‌ಗೆ ಅಜಯ್‌ ಸರ್‌ ಕರೆದಿದ್ದರು. ಹೀಗಾಗಿ ಡೇಟಿಂಗ್‌ ವಿಚಾರ ಸುಳ್ಳು, ಸುಮ್ಮನೆ ಪ್ರಚಾರ ಮಾಡಲಾಗುತ್ತದೆ ಎಂದು ಮೃಣಾಲ್‌ ಹೇಳಿದ್ದಾರೆ.

ಇದನ್ನೂ ಓದಿ