ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿನಿಮಾ ತೆರೆಯ ಮೇಲೆ ಮೋಡಿ ಮಾಡಿದ್ದ ‘ಗೀತಾ ಗೋವಿಂದಂ’ ಜೋಡಿ ಈಗ ನಿಜ ಜೀವನದಲ್ಲೂ ಒಂದಾಗುವ ಕಾಲ ಹತ್ತಿರ ಬಂದಂತಿದೆ. ‘ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ ಮತ್ತು ಟಾಲಿವುಡ್‌ನ ‘ರೌಡಿ ಸ್ಟಾರ್’ ವಿಜಯ್ ದೇವರಕೊಂಡ ಅವರ ಪ್ರೇಮ ಪುರಾಣ ಈಗ ಇಟಲಿಯ ರೋಮ್ ನಗರದ ಬೀದಿಗಳಲ್ಲಿ ಹೊಸ ತಿರುವು ಪಡೆದಿದೆ.

ಸದ್ಯ ರಶ್ಮಿಕಾ ಮಂದಣ್ಣ ಇಟಲಿಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಸುತ್ತಾಡುತ್ತಿದ್ದಾರೆ. ಅಲ್ಲಿನ ಸುಂದರ ಕ್ಷಣಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಶೇಷವೆಂದರೆ, ರಶ್ಮಿಕಾ ಕೈಲಿ ಹಿಡಿದಿರುವ ಸುಂದರ ಹೂಗುಚ್ಛ ಈಗ ಅಭಿಮಾನಿಗಳ ಕಣ್ಣು ಕೆಂಪಾಗಿಸಿದೆ. “ಈ ಹೂವುಗಳನ್ನು ವಿಜಯ್ ಅವರೇ ನೀಡಿದ್ದಾ?” ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ರಶ್ಮಿಕಾ ಹಂಚಿಕೊಂಡಿರುವ ಫೋಟೋಗಳಲ್ಲಿ ವಿಜಯ್ ಕಾಣಿಸಿಕೊಳ್ಳದಿದ್ದರೂ, ಅವರ ಇರುವಿಕೆಯ ಕುರುಹುಗಳು ಮಾತ್ರ ಎದ್ದು ಕಾಣುತ್ತಿವೆ.

ವಿಜಯ್ ಮತ್ತು ರಶ್ಮಿಕಾ ಒಟ್ಟಾಗಿರುವ ಬಗ್ಗೆ ದೊಡ್ಡ ಪುರಾವೆ ಸಿಕ್ಕಿದ್ದೇ ವಿಜಯ್ ಸಹೋದರ ಆನಂದ್ ದೇವರಕೊಂಡ ಅವರಿಂದ. ಆನಂದ್ ಅವರು ಹಂಚಿಕೊಂಡಿರುವ ಫೋಟೋದಲ್ಲಿರುವ ಹಿನ್ನೆಲೆ ಮತ್ತು ರಶ್ಮಿಕಾ ಅವರ ಫೋಟೋದಲ್ಲಿರುವ ಸ್ಥಳಗಳು ಒಂದೇ ಆಗಿವೆ. ಇದು “ವಿಜಯ್-ರಶ್ಮಿಕಾ ಜೊತೆಯಾಗಿಯೇ ಇದ್ದಾರೆ” ಎಂಬ ಫ್ಯಾನ್ಸ್ ನಂಬಿಕೆಗೆ ಬಲ ತುಂಬಿದೆ.

ದೀರ್ಘಕಾಲದ ಈ ಡೇಟಿಂಗ್ ವದಂತಿಗೆ ಈಗ ಮದುವೆಯ ಮುದ್ರೆ ಬೀಳುವ ಲಕ್ಷಣಗಳು ಕಾಣಿಸುತ್ತಿವೆ. ಗಾಂಧಿನಗರದಿಂದ ಹಿಡಿದು ಫಿಲ್ಮ್ ನಗರದವರೆಗೆ ಕೇಳಿ ಬರುತ್ತಿರುವ ಸುದ್ದಿಯೆಂದರೆ, ಫೆಬ್ರವರಿ 26ರಂದು ಈ ಜೋಡಿ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ. ರಾಜಸ್ಥಾನದ ಜೈಪುರದಲ್ಲಿ ಅತ್ಯಂತ ಖಾಸಗಿಯಾಗಿ, ಕೇವಲ ಆಪ್ತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಈ ವಿವಾಹ ಮಹೋತ್ಸವ ನಡೆಯಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ರಶ್ಮಿಕಾ ಈಗ ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮದುವೆಯ ನಂತರವೂ ಅವರು ಚಿತ್ರರಂಗದಲ್ಲಿ ಮುಂದುವರಿಯುತ್ತಾರೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ. ಸದ್ಯಕ್ಕೆ ಈ ಜೋಡಿ ಅಧಿಕೃತವಾಗಿ ಏನನ್ನೂ ಹೇಳದಿದ್ದರೂ, ಅಭಿಮಾನಿಗಳು ಮಾತ್ರ ತಮ್ಮ ನೆಚ್ಚಿನ ನಟ-ನಟಿಯ ವಿವಾಹಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

