April 10, 2026
Friday, April 10, 2026
spot_img

CINE | ದಳಪತಿಗೆ ತಪ್ಪುತ್ತಿಲ್ಲ ಸಂಕಷ್ಟಗಳ ಸರಮಾಲೆ: ರಿಲೀಸ್ ಗೂ ಮುನ್ನವೇ ‘ಜನ ನಾಯಗನ್’ ದೃಶ್ಯ ಲೀಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳು ನಟ ವಿಜಯ್ ಅಭಿನಯದ ಬಹುನಿರೀಕ್ಷಿತ ‘ಜನ ನಾಯಗನ್’ ಸಿನಿಮಾಗೆ ಹೊಸ ಸಂಕಷ್ಟ ಎದುರಾಗಿದೆ. ಬಿಡುಗಡೆಯ ದಿನಾಂಕದ ಅನಿಶ್ಚಿತತೆ ನಡುವೆ ಚಿತ್ರದ ಪ್ರಮುಖ ದೃಶ್ಯವೊಂದು ಆನ್‌ಲೈನ್‌ನಲ್ಲಿ ಸೋರಿಕೆಯಾಗಿರುವ ಸುದ್ದಿ ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸುಮಾರು ಐದು ನಿಮಿಷಗಳ ಕ್ಲಿಪ್ ವೈರಲ್ ಆಗಿದ್ದು, ಇದರಲ್ಲಿ ವಿಜಯ್ ಅವರ ಇಂಟ್ರೋ ಸೀನ್ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.

ಚಿತ್ರದ ಬಿಡುಗಡೆ ಈಗಾಗಲೇ ತಮಿಳುನಾಡಿನ ವಿಧಾನಸಭಾ ಚುನಾವಣೆ ಹಾಗೂ ಸೆನ್ಸಾರ್ ಪ್ರಕ್ರಿಯೆಯ ಕಾರಣದಿಂದ ತಡವಾಗಿತ್ತು. ಇದೇ ಸಂದರ್ಭದಲ್ಲಿ ಲೀಕ್ ಘಟನೆ ನಡೆದಿರುವುದು ನಿರ್ಮಾಣ ಸಂಸ್ಥೆ KVN ಪ್ರೊಡಕ್ಷನ್ಸ್ ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಲಿಂಕ್‌ಗಳನ್ನು ತಡೆಯಲು ತಂಡ ತುರ್ತು ಕ್ರಮ ಕೈಗೊಂಡಿದ್ದು, ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲು ಸಿದ್ಧತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:

ಅಭಿಮಾನಿಗಳು ಈ ಘಟನೆ ಹಿಂದೆ ಸಂಚು ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ವಿಜಯ್ ಅವರ ರಾಜಕೀಯ ಪ್ರವೇಶಕ್ಕೂ ಮುನ್ನ ಬಿಡುಗಡೆಯಾಗಬೇಕಿದ್ದ ಕೊನೆಯ ಸಿನಿಮಾ ಎಂಬ ಕಾರಣದಿಂದ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಸೋರಿಕೆಯಾದ ದೃಶ್ಯಗಳನ್ನು ಯಾರೂ ಹಂಚಿಕೊಳ್ಳಬಾರದು ಎಂದು ಫ್ಯಾನ್ಸ್ ಮನವಿ ಮಾಡಿದ್ದಾರೆ.

ಚಿತ್ರತಂಡದಿಂದ ಇನ್ನೂ ಅಧಿಕೃತ ಸ್ಪಷ್ಟನೆ ಹೊರಬರಬೇಕಿದ್ದು, ಈ ಲೀಕ್ ಚಿತ್ರದ ವ್ಯಾಪಾರ ಹಾಗೂ ಬಿಡುಗಡೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಅಭಿಮಾನಿಗಳು ಈಗ ಅಧಿಕೃತ ಘೋಷಣೆಯತ್ತ ಕಾದು ನೋಡುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !