February 28, 2026
Saturday, February 28, 2026
spot_img

CINE | ‘ಬಾಕ್ಸ್ ಆಫೀಸ್’ ಗಿಂತ ‘ಬೇಬಿ ಕೇರ್’ಗೆ ಫಸ್ಟ್ ಪ್ರಯಾರಿಟಿ: ಸ್ಟಾರ್ ನಟಿಯ ಹೊಸ ಷರತ್ತುಗಳೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೀಪಿಕಾ ಪಡುಕೋಣೆ ಅವರು ಇತ್ತೀಚೆಗೆ ಕೆಲವು ಪ್ರತಿಷ್ಠಿತ ಸಿನಿಮಾಗಳಿಂದ ಹಿಂದೆ ಸರಿದಿರುವುದು ಅವರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಇದಕ್ಕೆ ಮುಖ್ಯ ಕಾರಣ ಅವರು ವಿಧಿಸಿರುವ ‘ವರ್ಕ್ ಫ್ರಮ್ ಹೋಮ್’ ಮಾದರಿಯ ಷರತ್ತುಗಳು ಎನ್ನಲಾಗುತ್ತಿದೆ.

ಮಗುವಿನ ಆರೈಕೆಗಾಗಿ ದಿನಕ್ಕೆ ಕೇವಲ 8 ಗಂಟೆಗಳ ಕಾಲ ಮಾತ್ರ ಕೆಲಸ ಮಾಡುವುದಾಗಿ ಅವರು ತಿಳಿಸಿದ್ದಾರೆ. ಈ ನಿಯಮದಿಂದಾಗಿ ಕೆಲವು ಬಿಗ್ ಬಜೆಟ್ ಸಿನಿಮಾಗಳ ವೇಳಾಪಟ್ಟಿಗೆ ತೊಂದರೆಯಾಗಿದ್ದು, ಅವರು ಈ ಕೆಳಗಿನ ಪ್ರಾಜೆಕ್ಟ್‌ಗಳಿಂದ ಹೊರಬಂದಿದ್ದಾರೆ:

ಕಲ್ಕಿ 2898 AD 2: ಮೊದಲ ಭಾಗದಲ್ಲಿ ಮಿಂಚಿದ್ದ ದೀಪಿಕಾ, ಎರಡನೇ ಭಾಗದಿಂದ ಹೊರನಡೆದಿದ್ದಾರೆ.

ಸ್ಪಿರಿಟ್: ಪ್ರಭಾಸ್ ಅಭಿನಯದ ಈ ಚಿತ್ರದಲ್ಲೂ ದೀಪಿಕಾ ಕಾಣಿಸಿಕೊಳ್ಳುತ್ತಿಲ್ಲ.

ದಿ ವೈಟ್ ಲೋಟಸ್ (ಹಾಲಿವುಡ್ ಸರಣಿ): ಮಗು ಜನಿಸಿದ ತಕ್ಷಣವೇ ಈ ಆಫರ್ ಬಂದಿದ್ದರಿಂದ, ಆಡಿಷನ್‌ಗೆ ಹೋಗಲು ಸಾಧ್ಯವಾಗದೆ ಕೈಬಿಟ್ಟಿದ್ದಾರೆ.

ಸದ್ಯದ ಹಿನ್ನಡೆಯ ನಡುವೆಯೂ ದೀಪಿಕಾ ಅವರ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿಯಿದೆ. ಅಲ್ಲು ಅರ್ಜುನ್ ಹಾಗೂ ಅಟ್ಲಿ ಕಾಂಬಿನೇಷನ್‌ನ ಸಿನಿಮಾಗೆ ದೀಪಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಚಿತ್ರದ ಮೂಲಕ ಅವರು ಭರ್ಜರಿ ಕಂಬ್ಯಾಕ್ ಮಾಡುವ ನಿರೀಕ್ಷೆಯಿದೆ. ಸದ್ಯಕ್ಕೆ ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿರುವ ಅವರು, ಸಣ್ಣ ವಿರಾಮದ ನಂತರ ಮತ್ತೆ ಕ್ಯಾಮೆರಾ ಎದುರಿಸಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !