ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೆಗಾಸ್ಟಾರ್ ಚಿರಂಜೀವಿ ತಮ್ಮ ‘ಮನ ಶಂಕರ ವರಪ್ರಸಾದ್ ಗಾರು’ ಚಿತ್ರದ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಜನವರಿ 12 ರಂದು ಅದ್ದೂರಿಯಾಗಿ ತೆರೆಕಂಡ ಈ ಚಿತ್ರವು ಕೇವಲ ಎರಡೇ ದಿನಗಳಲ್ಲಿ 100 ಕೋಟಿ ಗಳಿಕೆ ಮಾಡುವ ಮೂಲಕ ‘ಬ್ಲಾಕ್ ಬಸ್ಟರ್’ ಪಟ್ಟಕ್ಕೇರಿದೆ.
ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ವಿಶ್ವಾದ್ಯಂತ ಬರೋಬ್ಬರಿ 84 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಅಬ್ಬರಿಸಿತ್ತು. ಎರಡನೇ ದಿನವೂ ತನ್ನ ನಾಗಾಲೋಟ ಮುಂದುವರಿಸಿದ ಚಿತ್ರವು 19.50 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಒಟ್ಟಾರೆ ಕಲೆಕ್ಷನ್ 100 ಕೋಟಿ ಗಡಿ ದಾಟಿದ್ದು, ಚಿರಂಜೀವಿ ಅವರ ಸಿನಿ ಜೀವನದ ಅತಿದೊಡ್ಡ ಕಂಬ್ಯಾಕ್ ಎನ್ನಲಾಗುತ್ತಿದೆ.
ಕುಟುಂಬ ಸಮೇತವಾಗಿ ನೋಡಬಹುದಾದ ಈ ಚಿತ್ರವು ಚಿಕ್ಕವರಿಂದ ಹಿಡಿದು ಹಿರಿಯರವರೆಗೆ ಎಲ್ಲರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸಂಕ್ರಾಂತಿ ರೇಸ್‌ನಲ್ಲಿ ಚಿರಂಜೀವಿ ಅವರು ಮತ್ತೊಮ್ಮೆ ತಾವು ‘ಬಾಕ್ಸ್ ಆಫೀಸ್ ಕಿಂಗ್’ ಎಂಬುದನ್ನು ಸಾಬೀತುಪಡಿಸಿದ್ದಾರೆ.


